Wednesday, August 10, 2022

Latest Posts

ಹತ್ತೇ ನಿಮಿಷದಲ್ಲಿ ಮಾಡಿ ಬಸಳೆ ಸೊಪ್ಪಿನ ರೈಸ್ ಬಾತ್: ಸಿಂಪಲ್ ರೆಸಿಪಿ

ಬಸಳೆ ಸೊಪ್ಪು ಆರೋಗ್ಯದ‌ ದೃಷ್ಟಿಯಿಂದಲೂ ಬಹಳ ಒಳ್ಳೆಯದು. ಬಸಳೆ ಸೊಪ್ಪಿನ ರೈಸ್ ಬಾತ್ ಬೆಳಿಗ್ಗಿನ ತಿಂಡಿಗೂ ಮಾಡಿಕೊಳ್ಳಬಹುದು. ಮಧ್ಯಾಹ್ನದ ಊಟಕ್ಕೂ ಮಾಡಿಕೊಳ್ಳಬಹುದು. ಬಹಳ‌ ಬೇಗ ಮಾಡಬಹುದಾದಂತಹ ರೆಸಿಪಿ ಇದು.

ಬೇಕಾಗುವ ಪದಾರ್ಥ:
ಅನ್ನ
ಬಸಳೆ ಸೊಪ್ಪು,
ಎಣ್ಣೆ
ಈರುಳ್ಳಿ
ಹಸಿ ಮೆಣಸು
ಕೊತ್ತಂಬರಿ ಸೊಪ್ಪು
ಸಾಸಿವೆ
ಬೆಳ್ಳುಳ್ಳಿ
ಉದ್ದಿನ ಬೇಳೆ
ಉಪ್ಪು
ಲಿಂಬು
ಸಕ್ಕರೆ

ಮಾಡುವ ವಿಧಾನ:
ಮೊದಲಿಗೆ ಅನ್ನವನ್ನು ಮಾಡಿಕೊಳ್ಳಿ. ಆನಂತರ 20 ಬಸಳೆ ಸೊಪ್ಪನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ. ಆನಂತರ ಈರುಳ್ಳಿ, ಕೊತ್ತಂಬರಿ ಸೊಪ್ಪು ಮತ್ತು ಹಸಿ ಮೆಣಸನ್ನೂ ಹೆಚ್ಚಿಕೊಳ್ಳಿ. ಒಂದು ಬಾಣಲೆಗೆ ಎಣ್ಣೆ ಹಾಕಿ ಕಾಯಿಸಿಕೊಳ್ಳಿ. ಅಮೇಲೆ ಸಾಸಿವೆ, ಉದ್ದಿನ ಬೇಳೆ, ಹೆಚ್ಚಿಕೊಂಡ ಹಸಿ ಮೆಣಸು, ಬೆಳ್ಳುಳ್ಳಿ, ಈರುಳ್ಳಿ, ಕೊತ್ತಂಬರಿ ಸೊಪ್ಪನ್ನು ಹಾಕಿ‌ ಫ್ರೈ ಮಾಡಿಕೊಳ್ಳಿ. ಆನಂತರ ಅದಕ್ಕೆ ಸಕ್ಕರೆ, ಉಪ್ಪು, ಲಿಂಬು ಹಾಕಿ ಮಿಕ್ಸ್ ಮಾಡಿ. ಆ ಮಿಕ್ಸ್ ಗೆ ಅನ್ನವನ್ನು ಹಾಕಿ ಕಲಸಿದರೆ ಬಸಳೆ ಸೊಪ್ಪಿನ ರೈಸ್ ಬಾತ್ ರೆಡಿ..

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss