Wednesday, July 6, 2022

Latest Posts

ಹಾತ್ರಾಸ್ ಅತ್ಯಾಚಾರ ಪ್ರಕರಣ: ಬಿಗಿ ಭದ್ರತೆಯೊಂದಿಗೆ ನಾಳೆ ಹೈಕೋರ್ಟ್​ಗೆ ಹಾಜರಾಗಲಿದೆ ಸಂತ್ರಸ್ತೆಯ ಕುಟುಂಬ!

ಹಾತ್ರಾಸ್ : ಹಾತ್ರಾಸ್ ಸಾಮೂಹಿಕ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ಮೃತಪಟ್ಟಿರುವ ಪಟ್ಟಿರುವ  ದಲಿತ ಯುವತಿಯ ಕುಟುಂಬದ ಸದಸ್ಯರು   ಸೋಮವಾರ ಅಲಹಾಬಾದ್‌ ಹೈಕೋರ್ಟ್‌ನ ಲಖನೌ ನ್ಯಾಯ ಪೀಠದ ವಿಚಾರನೆಗೆ ಹಾಜರಾಗಬೇಕಿದೆ.

ಸಂತ್ರಸ್ತೆ ಕುಟುಂಬದವರನ್ನು ಹೈಕೋರ್ಟ್ ಕರೆತರಲು ಹಾತ್ರಸ್‌ ಜಿಲ್ಲಾ ನ್ಯಾಯಾಧೀಶರು ನೋಡಲ್ ಅಧಿಕಾರಿ ನೇಮಿಸಿದ್ದಾರೆ. ಸಂತ್ರಸ್ತೆ ಕುಟುಂಬದವರಿಗೆ ಬಿಗಿ ಭದ್ರತೆ ಒದಗಿಸುವುದು ಪೊಲೀಸರ ಜವಾಬ್ದಾರಿ ಎಂದು ಹಾತ್ರಸ್ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿನೀತ್ ಜೈಸ್ವಾಲ್ ತಿಳಿಸಿದರು.

ಸಂತ್ರಸ್ತೆಯ ಮನೆ ಇರುವ ಬುಲ್​ಗಢಿಪ್ರದೇಶದಲ್ಲಿ 8 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು, 60 ಭದ್ರತಾ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ. ಕುಟುಂಬದ ಎಷ್ಟು ಜನರು, ಎಷ್ಟು ಗಂಟೆಗೆ ಕೋರ್ಟ್‌ಗೆ ಹಾಜರಾಗಬೇಕು ಎಂಬ ಬಗ್ಗೆ ಜಿಲ್ಲಾಡಳಿತ ವೇಳಾಪಟ್ಟಿ ರೂಪಿಸಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss