Thursday, July 7, 2022

Latest Posts

ಹತ್ರಾಸ್ ಅತ್ಯಾಚಾರ ಪ್ರಕರಣ: ಕನ್ನಡ ರಣಧೀರ ಪಡೆ ಕಾರ್ಯಕರ್ತರಿಂದ ಮೇಣಬದ ಬತ್ತಿ ಹಿಡಿದು ಪ್ರತಿಭಟನೆ

ಬಳ್ಳಾರಿ: ಉತ್ತರ ಪ್ರದೇಶದಲ್ಲಿ ಯುವತಿ ಮೇಲೆ ಅತ್ಯಾಚಾರ, ಹತ್ಯೆ ಖಂಡಿಸಿ ಕನ್ನಡ ರಣಧೀರ ಪಡೆ ಕಾರ್ಯಕರ್ತರು ಬುಧವಾರ ಸಂಜೆ ಮೇಣಬದ ಬತ್ತಿ ಹಿಡಿದು ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಎಚ್.ಆರ್.ಗವಿಯಪ್ಪ ವೃತ್ತದ ಮೂಲಕ ನಗರದ ನಾನಾ ರಸ್ತೆಯ ಮೂಲಕ ಸಂಚರಿಸಿ ಗಡಗಿ‌ ಚೆನ್ನಪ್ಪ ವೃತ್ತದ ಬಳಿ ಜಮಾಯಿಸಿದ ಕಾರ್ಯಕರ್ತರು ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ
ಕನ್ನಡ ರಣಧೀರ ಪಡೆ ಸಂಘಟನೆ ಜಿಲ್ಲಾಧ್ಯಕ್ಷ ಸೈಯದ್ ಜಿಲಾನ್ ಅವರು, ಉತ್ತರಪ್ರದೇಶದ ಬತ್ರಾಸ್ ಜಿಲ್ಲೆಯಲ್ಲಿ ‌ನಡೆದ ಯುವತಿ ಮೇಲೆ ಅತ್ಯಾಚಾರ, ಹತ್ಯೆ ಮಾಡಿದ ಘಟನೆ ಇಡೀ ನಾಗರಿಕ ಸಮಾಜ‌ ತಲೆ ತಗ್ಗಿಸುವಂತಾಗಿದೆ. ಇದೊಂದು ನೀಚ, ಹ್ಯೇಯ ಕೃತ್ಯವಾಗಿದೆ.

ಈ ಅಮಾನವೀಯ ಘಟನೆಗೆ ಕಾರಣರಾದ ವಿಕೃತ ಕಾಮುಕರನ್ನು ಬಂಧಿಸಿ, ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿದರು.
ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಸಾಮಾನ್ಯ ಜನರು ಪರದಾಡುವಂತಾಗಿದೆ. ನಿತ್ಯ ಕೆಲ ಸಮುದಾಯದವರ ಮೇಲೆ ಹಲ್ಲೆ, ದೌರ್ಜನ್ಯ, ದಬ್ಬಾಳಿಕೆ, ಅತ್ಯಾಚಾರ ಪ್ರಕರಣಗಳು ನಡೆಯುತ್ತಿದ್ದು, ಸಿ.ಎಂ.ಯೋಗಿ ಅದಿತ್ಯನಾಥ್ ಸರ್ಕಾರ ಕಡಿವಾಣ ಹಾಕಬೇಕು, ಯುವತೀಯರಿಗೆ, ಮಹಿಳೆಯರಿಗೆ ಸೂಕ್ತ ಭದ್ರತೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss