Thursday, August 18, 2022

Latest Posts

ಹತ್ರಾಸ್ ಅತ್ಯಾಚಾರ ಬೆನ್ನಲ್ಲೇ ಮತ್ತೊಂದು ಸಾಮೂಹಿಕ ಅತ್ಯಾಚಾರ: ಸಂತ್ರಸ್ತೆ ಸಾವು,ಆರೋಪಿಗಳ ಬಂಧನ

ಲಖ್ನೋ: ಉತ್ತರಪ್ರದೇಶದ ಹತ್ರಾಸ್ ಪ್ರಕರಣದ ಬೆನ್ನಲ್ಲೇ ಮತ್ತೊಂದು ಸಾಮೂಹಿಕ ಅತ್ಯಾಚಾರ ನಡೆದಿದೆ.
ಉತ್ತರ ಪ್ರದೇಶದ ಬಲ್ರಾಮ್‌ಪುರದಲ್ಲಿ ಇಬ್ಬರು ಕಾಮುಕರಿಂದ 22 ವರ್ಷದ ಯುವತಿ ಮೇಲೆ ಅತ್ಯಾಚಾರ ನಡೆದಿದ್ದು, ಆಕೆ ಮೃತಪಟ್ಟಿದ್ದಾಳೆ.
ಬಲ್ರಾಂಪುರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಸಾಹಿಲ್ ಹಾಗೂ ಶಾಹಿದ್ ಆರೋಪಿಗಳು ಎನ್ನಲಾಗಿದೆ.
ಬಿಕಾಂ ಓದುತ್ತಿದ್ದ ಯುವತಿ ಕಾಲೇಜಿನಿಂದ ವಾಪಾಸ್ ಬರುವಾಗ ಈ ಪೈಶಾಕಿತ ಕೃತ್ಯ ನಡೆದಿದೆ.
ಆಕೆ ಟ್ಯಾಕ್ಸಿ ಹಿಡಿದು ಮನೆ ಕಡೆ ಬಂದಿದ್ದು, ಆಕೆ ಸ್ಪೈನಲ್ ಕಾರ್ಡ್ ಹಾಗೂ ಕಾಲು ಮುರಿದಿತ್ತು. ತಕ್ಷಣ ಸಮೀಪದ ಆಸ್ಪತ್ರೆಗೆ ಹೊರಟೆವು. ಮಾರ್ಗಮಧ್ಯೆಯೇ ಆಕೆ ಕೊನೆಯುಸಿರೆಳೆದಳು ಎಂದು ಸಂತ್ರಸ್ತೆ ಕುಟುಂಬಸ್ತರು ಹೇಳಿದ್ದಾರೆ.
ಆಕೆ ಮೇಲೆ ಅತ್ಯಾಚಾರ ಮಾಡುವುದಕ್ಕೂ ಮುನ್ನ ವಿಷ ಕುಡಿಸಿದ್ದಾರೆ ಎಂದು ಕುಟುಂಬಸ್ತರು ಆರೋಪಿಸಿದ್ದಾರೆ.
ನನ್ನ ಮಗಳು ಮನೆಗೆ ಬಂದಾಗ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ನನಗೆ ತುಂಬಾ ನೋವಾಗುತ್ತಿದೆ, ನಾನು ಉಳಿಯುವುದಿಲ್ಲ ಎಂದು ಹೇಳಿದಳು ಎಂದು ತಾಯಿ ಕಣ್ಣೀರಿಟ್ಟಿದ್ದಾರೆ. ಹತ್ರಾಸ್ ಅತ್ಯಾಚಾರ ಪ್ರಕರಣಕ್ಕೆ ದೇಶವೇ ಮರುಗುತ್ತಿದ್ದು, ಅದರ ಬೆನ್ನಲ್ಲೇ ಇನ್ನೊಂದು ಪೈಶಾಚಿಕ ಕೃತ್ಯ ನಡೆದಿರುವುದು ಶೋಚನೀಯವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!