Sunday, June 26, 2022

Latest Posts

ಹತ್ರಾಸ್ ಗಲಾಟೆಗೆ ಸಂಚು ರೂಪಿಸಿದ ಆರೋಪ: ರಾಹುಲ್ ಗಾಂಧಿ ಆಪ್ತ ಶ್ಯೋರಾಜ್ ಜೀವನ್ ಅರೆಸ್ಟ್

ಲಕ್ನೋ: ಹತ್ರಾಸ್ ನಲ್ಲಿ ಹಿಂಸಾಚಾರ ನಡೆಸಲು ಸಂಚು ರೂಪಿಸಿದ ಆರೋಪದ ಮೇಲೆ ಉತ್ತರ ಪ್ರದೇಶ ಪೊಲೀಸರು ಕಾಂಗ್ರೆಸ್ ನಾಯಕ ಶ್ಯೋ ರಾಜಕ್ ಜೀವನ್ ರನ್ನು ಬಂಧಿಸಿದ್ದಾರೆ. ಇತ್ತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಪ್ತ ಎನ್ನಲಾಗುತ್ತಿದೆ.
ಉತ್ತರ ಪ್ರದೇಶದ ಪೊಲೀಸರು ಶ್ಯೋರಾಜ್ ಜೀವನ್​​ಗೆ ನೋಟಿಸ್ ನೀಡಿದ್ದರು. ಅದರಂತೆ ಇಂದು ವಿಚಾರಣೆಗೆ ಹಾಜರಾಗಿದ್ದರು. ಸುದೀರ್ಘ ವಿಚಾರಣೆ ಬಳಿಕ ಪೊಲೀಸರು ಅವರನ್ನ ಬಂಧಿಸಿದ್ದಾರೆ.
ಶ್ಯೋರಾಜ್ ಜೀವನ್ ವಿರುದ್ಧ ಹತ್ರಾಸ್ ಘಟನೆ ಬಳಿಕ ಗಲಾಟೆಗೆ ಪ್ರಚೋದನೆ ನೀಡಿದ್ದಾರೆ ಅನ್ನೋ ಆರೋಪ ಇದೆ. ಅಲ್ಲದೇ ಈ ಆರೋಪಕ್ಕೆ ಸಂಬಂಧಿಸಿದಂತೆ ಕೆಲವು ರಾಷ್ಟ್ರೀಯ ಮಾಧ್ಯಮಗಳು ಸ್ಟಿಂಗ್ ಆಪರೇಷನ್ ಮಾಡಿರುವ ವಿಡಿಯೋ ಕೂಡ ಹರಿದಾಡಿತ್ತು. ಅದರಂತೆ ಉತ್ತರ ಪ್ರದೇಶದ ಪೊಲೀಸರು ಎಫ್​ಐಆರ್ ದಾಖಲಿಸಿಕೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss