Thursday, July 7, 2022

Latest Posts

ಹಬ್ಬದ ಖುಷಿ ನಡುವೆ ‘ಬಿಸಿ’ ಸುದ್ದಿ: 88.14 ಲಕ್ಷಕ್ಕೆ ಜಿಗಿದ ಕೋವಿಡ್ ಸೋಂಕಿತರ ಸಂಖ್ಯೆ

ಹೊಸ ದಿಗಂತ ಆನ್‌ಲೈನ್ ಡೆಸ್ಕ್:

ದೀಪಾವಳಿ ಹಬ್ಬದ ಖುಷಿಯ ನಡುವೆ ಆತಂಕಕಾರಿ ಸುದ್ದಿ ನೀಡಿದೆ ಈ ಭಾನುವಾರ. ದೇಶದಲ್ಲಿ ಮತ್ತೆ ಕೊರೋನಾ ಸೋಂಕು ಪ್ರಮಾಣ ಏರಿಕೆಯ ಸೂಚನೆ ನೀಡಿದ್ದು, ಕಳೆದ 24 ಗಂಟೆಯಲ್ಲಿ  41,100 ಹೊಸ ಪ್ರಕರಣಗಳು ದೃಢಪಟ್ಟಿವೆ. ಜೊತೆಗೆ ಕೊರೋನಾ ಸೋಂಕಿನಿಂದ 447 ಮಂದಿ ಅಸುನೀಗಿದ್ದಾರೆ.

ಭಾನುವಾರ ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿದ ಬುಲೆಟಿನ್ ವರದಿಯಂತೆ ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 88.14 ಲಕ್ಷಕ್ಕೆ ಏರಿಕೆಯಾದರೆ, ಸಾವಿನ ಸಂಖ್ಯೆ 1,29,635ಕ್ಕೆ ಜಿಗಿತ ಕಂಡಿದೆ. ದೇಶದಲ್ಲಿ ಗುಣಮುಖಿತರ ಸಂಖ್ಯೆ 82,05,728 ಆಗಿದ್ದು, ಗುಣಮುಖಿತರ ಶೇಕಡಾವಾರು ಸಂಖ್ಯೆ 93.04ಕ್ಕೆ ಏರಿದೆ. ಹೀಗಾಗಿ ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ 4,80,714ಕ್ಕೆ ಏರಿಕೆಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss