Monday, July 4, 2022

Latest Posts

ಹರಿಯಾಣದಿಂದ ಮೈಸೂರಿನ ಸುತ್ತೂರು ಮಠಕ್ಕೆ ಬಂದ ಗಿರ್ ತಳಿಯ ಹಸುಗಳು

ಮೈಸೂರು: ಅರಮನೆ ನಗರಿ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಸುತ್ತೂರು ಶಾಖಾಮಠಕ್ಕೆ ದೇಸಿಯ ಗಿರ್ ತಳಿಗಳ ೨ ಹಸುಗಳು ಮತ್ತು ಒಂದು ಕರು ಹರಿಯಾಣದಿಂದ ಆಗಮಿಸಿವೆ. ಗಿರ್ ಹಸುಗಳು ಶುದ್ಧ ದೇಸಿ ತಳಿಯ ಹಸುಗಳಾಗಿದ್ದು, ಇವು ಹೆಚ್ಚು ರೋಗ ನಿರೋಧಕ ಶಕ್ತಿಯನ್ನು ಹೊಂದಿವೆ.

ಅಲ್ಲದೇ ಕಡಿಮೆ ಖರ್ಚಿನಲ್ಲಿ ಹೆಚ್ಚು ಹಾಲನ್ನು ನೀಡುತ್ತವೆ. ಗುಜರಾತ್ ಭಾಗದಲ್ಲಿ ಈ ಹಸುಗಳು ಹೆಚ್ಚಾಗಿ ಕಂಡುಬರುತ್ತವೆ. ದಾವಣಗೆರೆಯ ಖ್ಯಾತ ಉದ್ಯಮಿ ಶಾಮನೂರು ಎಸ್. ಗಣೇಶ್ ಈ ಹಸುಗಳನ್ನು ಸುತ್ತೂರು ಮಠಕ್ಕೆ ಕೊಡುಗೆಯಾಗಿ ನೀಡಿದ್ದಾರೆ.

ಮಠಕ್ಕೆ ಆಗಮಿಸಿದ ಗಿರ್ ತಳಿಯ ಹಸುಗಳನ್ನು ಸುತ್ತೂರು ಮಠದ ಪೀಠಾಧಿಪತಿಗಳಾದ ಶ್ರೀ ಶಿವರಾತ್ರಿ ದೇಶಿಕೇಂದ್ರಸ್ವಾಮಿ ಸಾನ್ನಿಧ್ಯದಲ್ಲಿ ಪೂಜೆ ಸಲ್ಲಿಸಿ ಬರಮಾಡಿಕೊಳ್ಳಲಾಯಿತು. ಈ ಸಂದರ್ಭ ಪ್ರೊ. ಕೆ. ಅನಂತರಾಮು, ಗುರುಕುಲ ಸಾಧಕರು ಹಾಗೂ ಶ್ರೀಮಠದ ಸೇವಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss