Sunday, July 3, 2022

Latest Posts

ಹರಿಯಾಣದ ಮೊದಲ ಮಹಿಳಾ ಸಂಸದೆ ಚಂದ್ರವತಿ ದೇವಿ ನಿಧನ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಹರಿಯಾಣದ ಮೊದಲ ಮಹಿಳಾ ಸಂಸದೆ ಹಾಗೂ ಪುದುಚೇರಿಯ ಲೆಫ್ಟಿನೆಂಟ್​ ಗವರ್ನರ್​ ಚಂದ್ರವತಿ ದೇವಿ ಕೊರೋನಾ ಸೋಂಕಿನಿಂದ ಭಾನುವಾರ ರಾತ್ರಿ ನಿಧನರಾಗಿದ್ದಾರೆ.

ಚಂದ್ರವತಿ ದೇವಿ ಅವರಿಗೆ 92 ವರ್ಷವಾಗಿತ್ತು.  ನವೆಂಬರ್ 5 ರಂದು ಅನಾರೋಗ್ಯದ ಕಾರಣ ರೋಹ್ಟಕ್​ ಪೋಸ್ಟ್​ ಗ್ರಾಡ್ಯುವೇಟ್ ಇನ್ಸ್​ಟ್ಯೂಟ್​ ಆಫ್​ ಮೆಡಿಕಲ್​ ಸೈನ್ಸ್​ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ನವೆಂಬರ್ 15 ರಂದು ರಾತ್ರಿ ಕೋವಿಡ್ ನಿಂದ ನಿಧನರಾಗಿದ್ದಾರೆ.

ಜನತಾ ಪಕ್ಷ ಸೇರಿ ಚುನಾವಣೆಯಲ್ಲಿ ಗೆಲವು ದಾಖಲಿಸುವ ಮೂಲಕ ಹರಿಯಾಣದ ಮೊದಲ ಸಂಸದೆ ಎಂಬ ಕೀರ್ತಿಗೆ ಚಂದ್ರವತಿ ದೇವಿ ಭಾಜನರಾಗಿದ್ದರು.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss