ಹರ್ಯಾಣ: ಹಿಸಾರ್ ಜಿಲ್ಲೆಯಲ್ಲಿ ದುಷ್ಕರ್ಮಿಗಳು ಉದ್ಯಮಿಯೊಬ್ಬರ 11 ಲಕ್ಷ ರೂ. ಹಣ ದೋಚಿ, ಕಾರ್ಗೆ ಬೆಂಕಿ ಇಟ್ಟು, ಉದ್ಯಮಿಯನ್ನು ಜೀವಂತವಾಗಿ ಸುಟ್ಟುಹಾಕಿದ್ದಾರೆ.
ಹಿಸಾರ್ನ ಹನ್ಸಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಉದ್ಯಮಿ ರಾಮ್ ಮೆಹರ್ ಮೃತಪಟ್ಟ ವ್ಯಕ್ತಿ. ಕಾರಿನಲ್ಲಿ ಇವರು ಮನೆಗೆ ತೆರಳುತ್ತಿದ್ದ ಸಂದರ್ಭ ದರೋಡೆಕಾರರು ಕಾರ್ ತಡೆದು ಈ ದುಷ್ಕೃತ್ಯ ನಡೆಸಿದ್ದಾರೆ.
ಉದ್ಯಮಿ ಬಳಿ ಇದ್ದ 11 ಲಕ್ಷ ರೂ. ಲಕ್ಷ ರೂಪಾಯಿ ದೋಚಿ, ಕಾರಿನೊಳಗೆ ಆತನನ್ನು ಕೂರಿಸಿ ಲಾಕ್ ಮಾಡಿದ್ದಾರೆ. ನಂತರ ಹೊರಗಿನಿಂದ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ಕಾರಿನೊಳಗೆ ಸುಟ್ಟ ಶವ ಪತ್ತೆಯಾಗಿತ್ತು. ಕಾರಿನ ನಂಬರ್ ಪ್ಲೇಟ್ ಮೂಲಕ ವ್ಯಕ್ತಿ ಗುರುತು ಪತ್ತೆ ಹಚ್ಚಲಾಗಿದೆ. ಬ್ಯಾಂಕ್ನಿಂದ ಹಣ ಡ್ರಾ ಮಾಡಿಕೊಂಡು ವಾಪಸ್ ಬರುತ್ತಿದ್ದಾಗ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.