Thursday, August 11, 2022

Latest Posts

ಹಲಸಿನ ತೊಳೆ ತಿಂದು ಬೀಜ ಬೀಸಾಡುತ್ತೀರಾ? ಇನ್ನು ಮುಂದೆ ಅಪ್ಪಿತಪ್ಪಿಯೂ ಈ ತಪ್ಪನ್ನು ಮಾಡಬೇಡಿ… ಏಕೆ ಗೊತ್ತಾ?

ನಾವೆಲ್ಲರೂ ಹಲಸಿನ ಹಣ್ಣಿನ ತೊಳೆ ತಿಂದು ಬೀಜ ಬೀಸಾಡುತ್ತೇವೆ. ಆದರೆ ಅದರೆ ಬೀಜದಲ್ಲಿಯೇ ನಮ ಆರೋಗ್ಯಕ್ಕೆ ಬೇಕಾಗಿರುವ ಅಂಶಗಳು  ಇರುತ್ತವೆ. ಹಾಗಾದರೆ ಏನೆಲ್ಲಾ ಉಪಯೋಗವಿದೆ ಹಲಸಿನ ಬೀಜದಿಂದ ನೋಡೋಣ….

ರೋಗ ನಿರೋಧಕ ಶಕ್ತಿ:
ಹಲಸಿನ ಬೀಜ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇದನ್ನು ನಿಯಮಿತವಾಗಿ ತಿನ್ನುತ್ತಿದ್ದರೆ ಆರೋಗ್ಯದಲ್ಲಿ ಸುಧಾರಣೆಯಾಗುತ್ತದೆ.

ಜೀರ್ಣ:
ನಾರು ಪದಾರ್ಥಗಳು ಬೇಗ ಜೀರ್ಣವಾಗುವಂತೆ ಹಲಸಿನ ಬೀಜ ಮಾಡುತ್ತದೆ.

ದೃಷ್ಟಿ:
ದೃಷ್ಟಿ ದೋಶವಿರುವವರು ನಿಯಮಿತವಾಗಿ ಹಲಸಿನ ಬೀಜ ತಿನ್ನುವುದರಿಂದ ದೃಷ್ಟಿ ದೋಷ ನಿವಾರಣೆಯಾಗುತ್ತದೆ.

ಮಲಬದ್ಧತೆ:
ಮಲಬದ್ಧತೆ ಸಮಸ್ಯೆ ಇರುವವರು ಹಲಸಿನ ಬೇಳೆಯನ್ನು ಬೇಯಿಸಿಕೊಂಡು ತಿನ್ನುವುದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.

ರಕ್ತದೊತ್ತಡ:
ಅಧಿಕ ರಕ್ತದೊತ್ತಡ ಮತ್ತು ಹೃದಯಾಘಾತವಾಗದಂತೆ ಹಲಸಿನ ಬೀಜ ತಡೆಯುತ್ತದೆ. ಇದನ್ನು ನಿಯಮಿತವಾಗಿ ಸೇವಿಸಬೇಕು.

ಮೂಳೆ:
ದೇಹದ ಮೂಳೆಗಳು ಸದೃಢವಾಗಿ ಇರುವಂತೆ ನೋಡಿಕೊಳ್ಳಲು ಹಲಸಿ ಬೀಜ ಬಹಳ ಉಪಯೋಗಕಾರಿ

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss