ಬೆಂಗಳೂರು: 65 ಟ್ರಕ್ ಗಳಲ್ಲಿ ಹಲಸೂರು ಕೆರೆಯಲ್ಲಿನ ಕಸ ತೆಗೆದು ಸ್ವಚ್ಛಮಾಡಿದ ಬಿಬಿಎಂಪಿ ಮತ್ತು ಇತರೆ ಕಾರ್ಯಕರ್ತರು.
5ದಿನಗಳ ಪರಿಶ್ರಮದಿಂದ ಹಲಸೂರು ಕೆರೆಯಲ್ಲಿನ ಕಸವನ್ನು ಹೊರಹಾಕಿದ 50 ಎಸ್ ವಿ ಎಂ,150 ಬಿಬಿಎಂಪಿ ಕೆಲಗಾರರು ಮತ್ತು 100 ಮೆಗ್ ಕಾರ್ಪ್ಸ್ ಇಂಜಿನೀಯರ್ಗಳು ಸೇರಿ ಕೆರೆಯಲ್ಲಿ ಅನವಶ್ಯಕವಾಗಿ ಬೆಳದಿದ್ದ ಗಿಡ, ಪ್ಲಾಸ್ಟಿಕ್, ತರ್ಮಾಕೋಲ್ ಮತ್ತು ಮುಂತಾದ ತ್ಯಾಜ್ಯಗಳನ್ನು ಹೊರಹಾಕಿದ್ದಾರೆ.
113 ಎಕರೆ ಕೆರೆಯನ್ನು ಸ್ವಚ್ಛಗೊಳಿಸಲು ಸೇನೆಯ ಮದ್ರಾಸ್ ಇಂಜಿನೀರ್ ಮತ್ತು ಸಾಪರ್ಸ್ ತಂಡಗಳು ಸೇರಿ 10 ದೋಣಿಗಳನ್ನು ನೀಡಿತ್ತು. ಕೆರೆಯಲ್ಲಿ ಶೇ.40ರಷ್ಟು ಹಯಸಿಂತ್(hyacinth) ಗಿಡಗಳು ಬೆಳೆದಿತ್ತು ಮತ್ತು ಕೆರೆಯ ಸ್ವಚ್ಛತೆಯನ್ನು ಮುಂದಿನ ದಿನಗಳಲ್ಲಿ ಪ್ರಿಸ್ಟೀಜ್ ಗ್ರೂಪ್ ಗೆ ನೀಡಲಾಗುವುದೆಂದು ಮುಖ್ಯ ಇಂಜಿನಿಯರ್ ಮೋಹನ್ ಕೃಷ್ಣ ತಿಳಿಸಿದ್ದಾರೆ.