Monday, August 15, 2022

Latest Posts

ಹಲ್ಲಿ ಶಾಸ್ತ್ರ: ದೇಹದ ಯಾವ ಭಾಗದ ಮೇಲೆ ಹಲ್ಲಿ ಬಿದ್ದರೆ ಏನಾಗುತ್ತದೆ? ಅದಕ್ಕೆ ಪರಿಹಾರವೇನು? ಇಲ್ಲಿ‌ ಮಹತ್ವದ ಮಾಹಿತಿ…

ಮನೆತುಂಬ ಹಲ್ಲಿಗಳಿದ್ದರೂ ಹಲ್ಲಿಯು ಮೈ ಮೇಲೆ ಬೀಳುವುದು ಬಹಳ ಅಪರೂಪ. ಹಲ್ಲಿ ಶಾಸ್ತ್ರದ ಪ್ರಕಾರ ಹಲ್ಲಿಗಳು ದೇಹದ ಯಾವ ಭಾಗದ ಮೇಲೆ ಬೀಳುತ್ತದೆಯೋ ಅದರ ಆಧಾರದ ಮೇಲೆ ಕೆಲವೊಂದು ಭವಿಷ್ಯವನ್ನು ಹೇಳಲಾಗುತ್ತದೆ. ಈ ಕೆಳಗೆ ಹಲ್ಲಿ ದೇಹದ ಯಾವ ಭಾಗದ ಮೇಲೆ ಬಿದ್ದರೆ ಏನು ಆಗುತ್ತದೆ? ಅದಕ್ಕೆ ಏನು ಪರಿಹಾರ ಎಂಬು‌ ಮಾಹಿತಿ‌ ಇದೆ.
ಹಲ್ಲಿ ಬಿದ್ದುದ್ದಕ್ಕೆ ಫಲಗಳು
  • ಹಲ್ಲಿಯು ತಲೆಯ ಮೇಲೆ ಬಿದ್ದರೆ ಕಲಹ(ಜಗಳ) ಆಗುತ್ತದೆ.
  • ಹಲ್ಲಿಯು ಮುಖದ ಮೇಲೆ ಬಿದ್ದರೆ ದ್ರವ್ಯ‌ ವ್ಯಾಪ್ತಿ (ಹಣ )ಸಿಗುತ್ತದೆ.
  • ಹಲ್ಲಿ ಕಣ್ಣುಗಳ ಮೇಲೆ ಬಿದ್ದರೆ ಜೀವನದಲ್ಲಿ ತೇಜಸ್ಸು, ಸರಕಾರದಿಂದ ಮನ್ನಣೆ, ಕೆಲಸ ಮಾಡುವ ಜಾಗದಲ್ಲಿ ಹೊಗಳಿಕೆ  ಸಿಗುತ್ತದೆ.
  • ಮೂಗಿನ ಮೇಲೆ ಹಲ್ಲಿ ಬಿದ್ದರೆ ಸುಗಂಧ ವಸ್ತು ಸಿಗುತ್ತದೆ.
  • ಮೇಲಿನ ತುಟಿಯ ಮೇಲೆ ಬಿದ್ದರೆ ಧನವ್ಯಯವಾಗುತ್ತದೆ.
  • ಕೆಳಗಿನ ತುಟಿಯ ಮೇಲೆ ಹಲ್ಲಿ ಬಿದ್ದರೆ ಧನ ಲಾಭ ಆಗುತ್ತದೆ.
  • ಮೂಗಿನ ತುದಿಯ ಮೇಲೆ ಹಲ್ಲಿ‌ ಬಿದ್ದರೆ ರೋಗ ಭಯ.
  • ಎಡ ಭುಜದ ಮೇಲೆ ಹಲ್ಲಿ‌ ಬಿದ್ದರೆ ವ್ಯಥೆ, ಚಿಂತೆ ಪ್ರಾರಂಭವಾಗುತ್ತದೆ.
  • ಬಲ‌ ಭುಜದ‌ ಮೇಲೆ ಹಲ್ಲಿ ಬಿದ್ದರೆ ಕಳ್ಳರ ಭಯ‌ ಎದುರಾಗುತ್ತದೆ.
  • ಎಡ ತೋಳಿನ ಮೇಲೆ ಹಲ್ಲಿ ಬಿದ್ದರೆ ಸುಖ ಹೆಚ್ಚುತ್ತದೆ.
  • ಬಲ ತೋಳಿನ ಮೇಲೆ ಹಲ್ಲಿ ಬಿದ್ದರೆ ದ್ರವ್ಯ ಲಾಭ.
  • ಎದೆಯ ಮೇಲೆ ಹಲ್ಲಿ ಬಿದ್ದರೆ ಯಶಸ್ಸು ಪ್ರಾಪ್ತಿ.
  • ಹೊಟ್ಟೆಯ ಮೇಲೆ ಹಲ್ಲಿ ಬಿದ್ದರೆ ಧಾನ್ಯ ಲಾಭ
  • ಹೊಕ್ಕಳಿನ ಮೇಲೆ ಹಲ್ಲಿ ಬಿದ್ದರೆ ತೀರ್ಥಯಾತ್ರೆ.
  • ಮೊಣಕಾಲಿನ ಮೇಲೆ ಹಲ್ಲಿ‌ ಬಿದ್ದರೆ ಕಾರ್ಯ ಸಿದ್ಧಿ.
  • ಕಾಲುಗಳ ಮೇಲೆ ಹಲ್ಲಿ ಬಿದ್ದರೆ ಪ್ರಯಾಣ.
ಮೇಲೆ ನಮೂದಿಸಿದ ಕೆಟ್ಟ ಫಲಗಳ ಪರಿಹಾರಕ್ಕಾಗಿ ತಮ್ಮ ಇಷ್ಟ ದೇವರಿಗೆ ತುಪ್ಪದ ದೀಪ ಹಚ್ಚಿಸಿ ಗಂಧ, ಪುಷ್ಪ, ಹಣ್ಣು ಫಲಗಳನ್ನು ಸಮರ್ಪಿಸಿ ಪೀಡೆ ಪರಿಹರಿಸೆಂದು ಪ್ರಾರ್ಥಿಸಿಕೊಳ್ಳಬೇಕು. ಸಾಧ್ಯವಾದಲ್ಲಿ ಕಂಚಿನ, ಬೆಳ್ಳಿಯ ಅಥವಾ ಚಿನ್ನದ  ಹಲ್ಲಿಯ ಪ್ರತಿಮೆಯನ್ನು ಮಾಡಿಸಿ, ದಕ್ಷಿಣೆ ಸಹಿತವಾಗಿ ಬ್ರಾಹ್ಮಣರಿಗೆ ನೀಡಿ ಆಶೀರ್ವಾದ ಪಡೆಯಬೇಕು. ಆಗ ದೋಷ ಪರಿಹಾರವಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss