ಮನೆಯಲ್ಲಿ ಅಡುಗೆಗೆ ಬಳಸುವ ಓಂ ಕಾಳು ಬಹಳ ಔಷಧೀಯ ಗುಣವನ್ನು ಹೊಂದಿದೆ. ಇದನ್ನು ಅನಾದಿಕಾಲದಿಂದಲೂ ಬಳಸುತ್ತಿದ್ದಾರೆ. ಬಹಳಷ್ಟು ಆರೋಗ್ಯದ ಸಮಸ್ಯೆಗೆ ಇದು ಔಷಧವಾಗಿದೆ. ಓಂ ಕಾಳು ಯಾವೆಲ್ಲ ರೋಗಗಳಿಗೆ ಬರುತ್ತದೆ ಎಂಬುದು ಇಲ್ಲಿದೆ ಓದಿ.
- ಜೀರ್ಣ ಕ್ರೀಯೆ ಸರಿಯಾಗದಿರುವವರು ಊಟದ ನಂತರ ಓಂ ಕಾಳಿಗೆ ಉಪ್ಪನ್ನು ಸೇರಿಸಿಕೊಂಡು ಅದನ್ನು ಅಗೆದು ತಿನ್ನುವುದರಿಂದ ಜೀರ್ಣಕ್ರೀಯೆ ಸರಿಯಾಗಿ ಆಗುತ್ತದೆ.
- ಹಲ್ಲುಗಳು ಹುಳುಕಾಗದಂತೆ ತಡೆಯುವಲ್ಲಿ ಓಂ ಕಾಳಿನ ಪಾತ್ರ ದೊಡ್ಡದಿದೆ. ಓಂ ಕಾಳನ್ನು ದಿನದಲ್ಲಿ ಮೂರು ಹೊತ್ತು ಒಂದು ಅರ್ಧ ಚಮಚ ಓಂ ಕಾಳನ್ನು ಬಾಯಿಗೆ ಹಾಕಿಕೊಂಡು ಅದನ್ನು ಅಗೆಯ ತಿನ್ನುವುದರಿಂದ ಹಲ್ಲುಗಳು ಹುಳುಕಾಗುವುದಿಲ್ಲ.
- ಜಂತು ಹುಳು ನಿವಾರಣೆಗೆ ಮಜ್ಜಿಗೆಗೆ ಓಂ ಕಾಳಿನ ಪುಡಿಯನ್ನು ಹಾಕಿಕೊಂಡು ಅದಕ್ಕೆ ಉಪ್ಪನ್ನು ಹಾಕಿಕೊಂಡು ಸೇವಿಸಿದರೆ ಜಂತು ಹುಳು ನಿವಾರಣೆಯಾಗುತ್ತದೆ.
- ಗ್ಯಾಸ್, ಹೊಟ್ಟೆ ಉಬ್ಬರ ಸಮಸ್ಯೆ ಇರುವವರು ಓಂ ಕಾಳಿನ ಪುಡಿಯನ್ನು ಅನ್ನಕ್ಕೆ ಹಾಕಿಕೊಂಡು ೫ ತುತ್ತು ಸೇವಿಸುವುದರಿಂದ ಗ್ಯಾಸ್ ಸಮಸ್ಯೆ ನಿವಾರಣೆಯಾಗುತ್ತದೆ.
- ಬಾಯಿಯ ದುರ್ಗಂಧ ಹೋಗಲಾಡಿಸಲು ದಿನದಲ್ಲಿ ಎರಡು ಹೊತ್ತು ಊಟ ಆದ ತಕ್ಷಣ ಓಂ ಕಾಳನ್ನು ಜಗಿದು ತಿನ್ನುವುದರಿಂದ ಬಾಯಿಯ ವಾಸನೆ ಹೋಗುತ್ತದೆ.
- ಮುಟ್ಟಿನ ದಿನಗಳಲ್ಲಿ ಅತಿಯಾಗಿ ರಕ್ತ ಸ್ರಾವ ಆಗುತ್ತಿದ್ದರೆ ಬಿಸಿ ಬಿಸಿ ಹಾಲಿಗೆ ಓಂ ಕಾಳಿನ ಪುಡಿಯನ್ನು ಬೆಳಿಗ್ಗೆ ಮತ್ತು ರಾತ್ರಿ ಹಾಕಿಕೊಂಡು ಸೇವಿಸುವುದರಿಂದ ರಕ್ತ ಸ್ರಾವ ನಿಲ್ಲುತ್ತದೆ.