Wednesday, June 29, 2022

Latest Posts

ಹಳೆಯ ಕೊರೋನಾಗಿಂತಲೂ ಸೂಪರ್ ಸ್ಪೀಡ್ ಕೊರೋನಾ ಹೆಚ್ಚು ಅಪಾಯಕಾರಿ: ಬ್ರಿಟನ್ ಪ್ರಧಾನಿ ಬೋರಿಸ್

ಹೊಸದಿಗಂತ ಆನ್ ಲೈನ್ ಡೆಸ್ಕ್:

ಇಂಗ್ಲೆಂಡ್ ನಲ್ಲಿ ಪತ್ತೆಯಾದ ಸೂಪರ್ ಸ್ಪೀಡ್ ಕೊರೋನಾ ವೈರಸ್ ಹಳೆಯ ವೈರಸ್ ಗಿಂತಲೂ ಹೆಚ್ಚು ಅಪಾಯಕಾರಿ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ತಿಳಿಸಿದ್ದಾರೆ.

ಇಂಗ್ಲೆಂಡ್, ಲಂಡನ್ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ರೂಪಾಂತರಿ ಕೊರೋನಾ ಸೋಂಕು ವೇಗವಾಗಿ ಹರಡುತ್ತಿದ್ದು, ಇದರಿಂದ ಸಾವಿನ ಪ್ರಮಾಣವೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದರು.

ದೇಶದಲ್ಲಿ ಈಗಾಗಲೇ ಎರಡು ಲಸಿಕೆಗಳನ್ನು ನೀಡಲಾಗುತ್ತಿದ್ದು, ಇದು ಕೊರೋನಾ ವೈರಸ್ ಹಾಗೂ ರೂಪಾಂತರಿ ಕೊರೋನಾ ವಿರುದ್ಧ ಹೋರಾಡಲು ಪರಿಣಾಮಕಾರಿಯಾಗಿದೆ ಎಂದು ಪುರಾವೆಗಳು ತಿಳಿಸಿವೆ ಎಂದರು.

ಈ ಬಗ್ಗೆ ಮಾಹಿತಿ ನೀಡಿದ ಬ್ರಿಟನ್ ಸರ್ಕಾರದ ಮುಖ್ಯ ವೈಜ್ಞಾನಿಕ ಸಲಹೆಗಾರ ಸರ್ ಪ್ಯಾಟ್ರಿಕ್ ವ್ಯಾಲೆನ್ಸ್ ಅವರು, ಹಳೆಯ ಕೊರೋನಾ ವೈರಸ್ ಗಿಂತ ರೂಪಾಂತರಿ ಕೊರೋನಾ ವೈರಸ್ ಶೇ.30ರಷ್ಟು ಹೆಚ್ಚು ಅಪಾಯಕಾರಿಯಾಗಿದೆ. ಆದರೆ ಬ್ರಿಟನ್ ನಲ್ಲಿ ನೀಡುತ್ತಿರುವ ಫೈಜರ್ ಮತ್ತು ಆಸ್ಟ್ರಾಜನಿಕ ಲಸಿಕೆಗಳು ಸೋಂಕಿತರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss