ಹೊಸದಿಗಂತ ಆನ್ ಲೈನ್ ಡೆಸ್ಕ್:
ರಾಜ್ಯದಲ್ಲಿ 63 ಲಕ್ಷ ವಾಹನಗಳು 15 ವರ್ಷಕ್ಕಿಂತ ಹಿಂದಿನವು ಎಂದು ಸಾರಿಗೆ ಇಲಾಖೆ ಮಾಹಿತಿ ನೀಡಿದೆ.
ಕೇಂದ್ರ ಬಜೆಟ್ ಮಂಡನೆ ವೇಳೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹಳೆ ವಾಹನಗಳನ್ನು ಸ್ವಯಂ ಪ್ರೇರಿತವಾಗಿ ಗುಜರಿಗೆ ಹಾಕುವ ನೀತಿಯನ್ನು ಜಾರಿಗೆ ತರೋದಾಗಿ ಹೇಳಿದ್ದರು. ಇದೀಗ ಕಳೆದ ವರ್ಷದ ಮಾರ್ಚ್ ತಿಂಗಳವರೆಗೆ ರಾಜ್ಯದಲ್ಲಿ 40.2 ಲಕ್ಷ ದ್ವಿಚಕ್ರ ವಾಹನ, 11 ಲಕ್ಷ ಕಾರು, 2.2 ಲಕ್ಷ ಟ್ರಕ್-ಲಾರಿಗಳು ಹಾಗೂ 2.6 ಆಟೋ ರಿಕ್ಷಾಗಳು 15 ವರ್ಷಕ್ಕಿಂತ ಹಳೆಯದಾಗಿವೆ.
ಇನ್ನು ಕೇವಲ ಬೆಂಗಳೂರು ಒಂದರಲ್ಲೇ 12.5 ಲಕ್ಷ ದ್ವಿಚಕ್ರ ವಾಹನಗಳು 15 ವರ್ಷ ಹಳೆಯದಾಗಿವೆ. 5.3 ಲಕ್ಷ ಕಾರುಗಳು, 1.2 ಲಕ್ಷ ಆಟೋಗಳು ಗುಜರಿ ಸಾಲಿಗೆ ಸೇರಿವೆ.