ವಿಜಯಪುರ: ಹಳೇ ವೈಷಮ್ಯದ ಹಿನ್ನೆಲೆ ವೃದ್ಧನೊಬ್ಬನನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಆಳೂರ ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟವನನ್ನು ವಿಠ್ಠೋಬಾ ಪರಸಪ್ಪ ಸಾಲೋಟಗಿ (75) ಎಂದು ಗುರುತಿಸಲಾಗಿದೆ.
ವಿಠ್ಠೋಬಾ ಸಾಲೋಟಗಿ ಈತನನ್ನು ಹಳೇ ದ್ವೇಷದ ಕಾರಣಕ್ಕೆ ಕೊಡಲಿಯಿಂದ ಹತ್ಯೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.