Tuesday, August 16, 2022

Latest Posts

ಹಳ್ಳಕ್ಕೆ ಬಿದ್ದ ಟಿಟಿ: ದೇವಾಲಯಕ್ಕೆ ತೆರಳುತ್ತಿದ್ದ ಮೂವರ ಸಾವು

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಚಾಮರಾನಗರದ ಸುವರ್ಣಾವತಿ ಜಲಾಶಯದ ಬಳಿಯ ಗುಡಿಬೋರೆ ಬಳಿ ಅಪಘಾತ ಸಂಭವಿಸಿದೆ.
ತಮಿಳುನಾಡು ನೋಂದಣಿಯ ಟೆಂಪೋ ಟ್ರಾವೆಲರ್ ಹಳ್ಳಕ್ಕೆ ಬಿದ್ದು ಅಪಘಾತವಾಗಿದ್ದು, ಮೂವರು ಮೃತಪಟ್ಟಿದ್ದಾರೆ.
ತಮಿಳುನಾಡಿನಿಂದ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ದೇವರ ದರ್ಶನಕ್ಕೆ ಬರುತ್ತಿದ್ದ ಸುಬ್ರಹ್ಮಣ್ಯ (75) ಅವರ ಪತ್ನಿ ಅಮರಾವತಿ(65 ) ಹಾಗೂ ಪುತ್ರಿ ಕೋಕಿಲ(40) ಮೃತರು. ಈ ಅಪಘಾತದಲ್ಲಿ 11 ಜನ ಗಾಯಗೊಂಡಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss