Saturday, July 2, 2022

Latest Posts

ಹಸಿರ ಸೆರೆಗ ಹೊದ್ದು ಕುಳಿತ ಉತ್ತರ ಕನ್ನಡ ಜಿಲ್ಲೆಯಲ್ಲಿ ನೀವು ನೋಡಲೇ ಬೇಕಾದ ಪ್ರಸಿದ್ಧ ಪ್ರವಾಸಿ ತಾಣಗಳ ಲಿಸ್ಟ್ ಇಲ್ಲಿದೆ..! ಬಿಡುವು ಮಾಡಿಕೊಂಡು ಒಮ್ಮೆ ಬನ್ನಿ..

ಉತ್ತರ ಕನ್ನಡ ಎಂದರೆ ಮೊದಲು ನೆನಪಾಗುವುದೇ ಹಸಿರು, ಮಳೆ, ಫಾಲ್ಸ್, ಧಾರ್ಮಿಕ ಪುಣ್ಯ ಕ್ಷೇತ್ರಗಳು. ಮಳೆಗಾಲದಲ್ಲಿ ಇವೆಲ್ಲದರ ಸೌಂದರ್ಯ ಸವಿಯಲು ಎರಡು ಕಣ್ಣು ಸಾಲುವುದಿಲ್ಲ. ಒಂದೇ ದಿನದಲ್ಲಿ ಇಲ್ಲಿನ ಪ್ರವಾಸಿ ತಾಣಗಳನ್ನು ನೋಡಿ ಮುಗಿಸಲು ಆಗುವುದಿಲ್ಲ. ಕನಿಷ್ಠ ಒಂದು ವಾರವಾದರೂ ಬೇಕೇ ಬೇಕು. ಇಲ್ಲಿ ನಾನು ನೀವೂ ನೀಡಲೇ ಬೇಕಾದ ಕೆಲವು ಪ್ರಸಿದ್ಧ ತಾಣಗಳ ಬಗ್ಗೆ ಬರೆದಿದ್ದೇನೆ. ಉತ್ತರ ಕನ್ನಡ ಜಿಲ್ಲೆಗೆ ಬಂದಾಗ ಇವುಗಳನ್ನು ನೋಡಿಕೊಂಡೇ ಹೋಗಿ

ದಾಂಡೇಲಿ ಅಭಯಾರಣ್ಯ: ದಾಂಡೇಲಿ ಕಾರವಾರದಿಂದ ೪೦ ಕಿ.ಮೀ ದೂರದಲ್ಲಿ ಇದೆ. ದಾಂಡೇಲಿ ಅಭಯಾರಣ್ಯದಲ್ಲಿ ಕಾಡು ಮೃಗಗಳಿವೆ. ಅಭಯಾರಣ್ಯದ ಸುತ್ತ ಮುತ್ತಲೂ ಪ್ರವಾಸಿ ತಾಣಗಳೇ ಇವೆ. ಸಿಂಥೇರಿ ರಾಕ್ಸ್, ನಾಗಝರಿ ವ್ಯಾಲ್ಲಿ, ವಿಂಚೊಲಿ ರಿಪಿಡ್ಸ್, ಕಾವಲಾ ಕೇವ್ಸ್ ಮತ್ತು ಕನ್ನೇರಿ ಬ್ರಿಜ್. ಇಲ್ಲಿಗೆ ಡಿಸೆಂಬರ್ ನಿಂದ ಏಪ್ರಿಲ್ ತಿಂಗಳವರಗೆ ಭೇಟಿ ನೀಡಲು ಪ್ರಶಸ್ತ ಸಮಯ.

ಯಾಣ: ಕಾರವಾರದಿಂದ ೬೦ ಕೀ.ಮೀ. ಮತ್ತು ಶಿರಶಿಯಿಂದ ೪೦ ಕಿ.ಮೀ ದೂರದಲ್ಲಿ ಇದೆ. ಇದು ಪ್ರಸಿದ್ಧ ಪ್ರವಾಸಿ ತಾನವಾಗಿದೆ. ಇದು ಕಪ್ಪು ಶಿಲೆಯಲ್ಲಿ ನಿರ್ಮಿತವಾದ ಗುಹೆಯಾಗಿದ್ದು, ತುಂಬ ಮನೋಹರವಾಗಿದೆ. ಶಿವರಾತ್ರಿಯಲ್ಲಿ ಇಲ್ಲಿಗೆ ಜನರ ದಂಡೆ ಬರುತ್ತದೆ.

ಉಂಚಳ್ಳಿ ಜಲಪಾತ:ಧುಮ್ಮಿಕ್ಕುವ ಬೇಡ್ತಿ ನದಿಯ ಜಲಧಾರೆ ನೋಡುವುದೇ ಒಂದು ಖುಷಿ, ಬೇಡ್ತಿ ಕಣಿವೆಯ ಸುಂದರ ದೃಶ್ಯವೂ ಇಲ್ಲಿ ಗೋಚರಿಸುತ್ತದೆ. ಹಸಿರು ಅರಣ್ಯದ ಸೊಬಗನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದು. ಇದು ಶಿರಸಿಯಿಂದ 68 ಕಿಮೀ ದೂರದಲ್ಲಿದೆ.

ಬನವಾಸಿ: ಬನವಾಸಿ ಶಿರಶಿಗೆ ಹತ್ತಿರ. ಶಿರಸಿಯಿಂದ ೨೪ ಕಿ.ಮೀ. ದೂರದಲ್ಲಿ ಇದೆ. ಬನವಾಸಿ ಕದಂಬರ ರಾಜಧಾನಿಯಾಗಿತ್ತು. ಬನವಾಸಿಯಲ್ಲಿ ಪ್ರಸಿದ್ಧ ಮಧುಕೇಶ್ವರ ದೇವಾಲಯವಿದೆ. ಏಕಶಿಲ್ಪದ ಆಸ್ಥಾನ ಮಂಟಪ ಮತ್ತು ತ್ರಿಕಲೋಕ ಮಂಟಪಗಳು ಇವೆ.

ಮಾರಿಕಾಂಬಾ ದೇವಾಲಯ: ಕಾರವಾರದಿಂದ ಶಿರಸಿ ೯೦ ಕಿ.ಮೀ. ದೂರದಲ್ಲಿದೆ. ಬೆಂಗಳೂರಿನಿಂದ ೪೨೫ ಕಿ.ಮೀ ದೂರದಲ್ಲಿ ಇದೆ. ಇಲ್ಲಿನ ಮಾರಿಕಾಂಬಾ ಜಾತ್ರೆ ರಾಜ್ಯಾದ್ಯಂತ ಪ್ರಸಿದ್ಧಿ ಪಡೆದಿದೆ. ಇಲ್ಲಿಗೆ ತಮಿಳುನಾಡು, ಕೇರಳದಿಂದ ಭಕ್ತರು ಬರುತ್ತಾರೆ. ಇದೊಂದು ಶಕ್ತಿ ಪೀಠ.ಜೇನು ಕಲ್ಲು ಗುಡ್ಡ: ಸೂರ್ಯಾಸ್ತದ ಸೊಬಗು ಸವಿಯುವ ತಾಣವಿದು. ಕಣ್ಣು ಹಾಯಿಸಿದಷ್ಟೂ ದೂರ ಮೈದುಂಬಿ ಹರಿಯುವ ಬೇಡ್ತಿ ನದಿ- ಕಣಿವೆ ಇಲ್ಲಿಕಾಣಿಸುತ್ತದೆ. ಇದು ಶಿರಸಿಯಿಂದ ಸುಮಾರು 70 ಕಿಮೀ ದೂರದಲ್ಲಿದೆ. ಮಾಗೋಡು ಜಲಪಾತದ ಮಾರ್ಗದಲ್ಲೇ ಜೇನುಕಲ್ಲು ಗುಡ್ಡಕ್ಕೆ ತೆರಳಬಹುದು.

ಸಹಸ್ರಲಿಂಗ: ಶಾಲ್ಮಲಾ ನದಿಯ ಒಡಲಿನಲ್ಲಿರುವ ಸಾವಿರಾರು ಶಿವ ಲಿಂಗಗಳ ಪುಣ್ಯ ಸ್ಥಳವೇ ಸಹಸ್ರಲಿಂಗ. ಸೋಂದಾ, ಸ್ವರ್ಣವಲ್ಲಿಕ್ಷೇತ್ರಗಳ ಸಮೀಪದಲ್ಲಿದೆ. ಕೆಳದಿ ನಾಯಕರ ಕಾಲದಲ್ಲಿಇಲ್ಲಿಈಶ್ವರ ಲಿಂಗಗಳನ್ನು ಕೆತ್ತಲಾಗಿದೆ ಎನ್ನಲಾಗುತ್ತದೆ. ಇದೊಂದು ಸಂರಕ್ಷಿತ ಪ್ರದೇಶ. ಶಿರಸಿ- ಯಲ್ಲಾಪುರ ಮಾರ್ಗದಲ್ಲಿದ್ದು, ಶಿರಸಿಯಿಂದ 13 ಕಿಮೀ ದೂರದಲ್ಲಿದೆ.

ಮಾಗೋಡ ಫಾಲ್ಸ್: ಧುಮ್ಮಿಕ್ಕುವ ಬೇಡ್ತಿ ನದಿಯ ಜಲಧಾರೆ ನೋಡುವುದೇ ಒಂದು ಖುಷಿ, ಬೇಡ್ತಿ ಕಣಿವೆಯ ಸುಂದರ ದೃಶ್ಯವೂ ಇಲ್ಲಿ ಗೋಚರಿಸುತ್ತದೆ. ಹಸಿರು ಅರಣ್ಯದ ಸೊಬಗನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದು. ಇದು ಶಿರಸಿಯಿಂದ 68 ಕಿಮೀ ದೂರದಲ್ಲಿದೆ.

-ಕಾವ್ಯಾ ಜಕ್ಕೊಳ್ಳಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss