Thursday, July 7, 2022

Latest Posts

ಹಸಿವೆ ನೀಗಿಸಿಕೊಳ್ಳಿ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಿಂದ ಕೊಟ್ಟ ಅನ್ನ ತಿಪ್ಪೆಗೆಸೆದ ‘ನಿರಾಶ್ರಿತ’ ಕಾರ್ಮಿಕರು

ಸುಬ್ರಹ್ಮಣ್ಯ: ಕೊರೋನಾ ಲಾಕ್‌ಡೌನ್‌ನಿಂದ ನಿರಾಶ್ರಿತರಾದ ಕಾರ್ಮಿಕರಿಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಿಂದ ಒದಗಿಸಿದ ಅನ್ನವನ್ನು ಕಾರ್ಮಿಕರು ರಾಶಿ ರಾಶಿಯಾಗಿ ಕಸದ ತೊಟ್ಟಿಗೆ ಎಸೆಯುವ ಮೂಲಕ ಅಮಾನವೀಯ ವರ್ತನೆ ತೋರಿದ್ದಾರೆ.
ಸುಬ್ರಹ್ಮಣ್ಯ ದೇವಸ್ಥಾನದ ವಸತಿಗೃಹದಲ್ಲಿ ವಾಸ್ತವ್ಯ ಹೂಡಿರುವ ವಲಸೆ ಕಾರ್ಮಿಕರಿಗೆ ನೀಡಿದ ಅನ್ನವನ್ನು ಪೋಲು ಮಾಡಿರುವುದನ್ನು ದೇವಳದ ಭಕ್ತರು ಮತ್ತು ಸ್ಥಳೀಯ ನಿವಾಸಿಗಳು ಖಂಡಿಸಿದ್ದು, ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಪ್ಪಿನಂಗಡಿಯಲ್ಲಿ ಕೆಲಸ ಇಲ್ಲದೆ, ಕರೆತಂದವರು ಊಟ ನೀಡದ ಕಾರಣ ಉತ್ತರ ಭಾರತದ ವಲಸೆ ಕಾರ್ಮಿಕರು ಊರಿಗೆ ಹೋಗಲು ಬೆಂಗಳೂರಿಗೆ ನಡೆದುಕೊಂಡು ತೆರಳಲು ಇತ್ತೀಚೆಗೆ ಮುಂದಾಗಿದ್ದರು. ಅವರನ್ನು ಸುಬ್ರಹ್ಮಣ್ಯಕ್ಕೆ ಕಳುಹಿಸಿ ಅಲ್ಲಿನ ಅಭಯ ವಸತಿ ಗೃಹದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿತ್ತು. ದೇವಳದ ವತಿಯಿಂದ ಅವರಿಗೆ ಉಚಿತವಾಗಿ ಊಟ, ಉಪಾಹಾರ ಪೂರೈಕೆ ಮಾಡಲಾಗುತ್ತಿದೆ. ಆದರೆ, ಸೋಮವಾರ ವಲಸೆ ಕಾರ್ಮಿಕರಿಗೆ ನೀಡಿದ ದೇವಳದ ಪ್ರಸಾದ ಭೋಜನವನ್ನು ಬೃಹತ್ ಕಠಾರಗಳ ಮೂಲಕ ಕಸದ ತೊಟ್ಟಿಗೆ ಚೆಲ್ಲಲಾಗಿದೆ. ವಲಸೆ ಕಾರ್ಮಿಕರು ಮತ್ತು ಅವರಿಗೆ ಊಟ ಪೂರೈಸಿದವರ ಈ ವರ್ತನೆಗೆ ಈಗ ದೇವಳದ ಭಕ್ತರು ಹಾಗೂ ಸ್ಥಳೀಯರಿಂದ ಭಾರಿ ಆಕ್ರೋಶ ವ್ಯಕ್ತಗೊಂಡಿದೆ.
ಪರ್ಯಾಯ ವ್ಯವಸ್ಥೆ 
ವಲಸೆ ಕಾರ್ಮಿಕರು ಅನ್ನ ಚೆಲ್ಲಿದ ಬಗ್ಗೆ ದೇವಳದ ಆಡಳಿತ ವಿಚಾರಣೆ ನಡೆಸಿದ್ದು, ಕಾರ್ಮಿಕರಿಗೆ ಭೋಜನ ಪ್ರಸಾದದ ಬದಲು ಚಪಾತಿ ಅಥವಾ ಪರ್ಯಾಯ ವ್ಯವಸ್ಥೆ ಮಾಡಲು ಸಿದ್ಧತೆ ನಡೆಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss