Wednesday, August 17, 2022

Latest Posts

ಹಸೆಮಣೆ ಏರಿದ ಸ್ಯಾಂಡಲ್ ವುಡ್ ನಟಿ ‘ಮಯೂರಿ ಕ್ಯಾತರಿ’

ಬೆಂಗಳೂರು: ಕನ್ನಡ ಕಿರುತೆರೆಯ ಖ್ಯಾತ ನಟಿ ಮಯೂರಿ ಕ್ಯಾತರಿ ಇಂದು ತಮ್ಮ ಬಹುಕಾಲದ ಸ್ನೇಹಿತ ಅರುಣ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಶುಕ್ರವಾರ ಜೆಪಿ ನಗರದ ದೇವಸ್ಥಾನದಲ್ಲಿ ಮಯೂರಿ ದಂಪತಿಗಳ ಮದುವೆ ನಡೆದಿದೆ. 10 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಬಳಿಕ ಗುರು ಹಿರಿಯ ಸಮ್ಮತಿಯ ಮೇರೆಗೆ ನವ ಜೋಡಿ ಇದೀಗ ಹಸೆಮಣೆ ಏರಿದ್ದಾರೆ.

ಅಶ್ವಿನಿ ನಕ್ಷತ್ರ ಧಾರವಾಹಿಯಿಂದ ಕಿರುತೆರೆಗೆ ಎಂಟ್ರಿ ನೀಡಿದ ಮಯೂರಿ, ಸ್ಯಾಂಡಲ್ ವುಡ್ ನ ಕೃಷ್ಣ ಲೀಲಾ, ಇಷ್ಟಕಾಮ್ಯ, ರುಸ್ತುಂ, ಮೌನಂ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!