Wednesday, June 29, 2022

Latest Posts

ಹಾಂಕ್‌ಕಾಂಗ್ ಏರ್‌ಪೋರ್ಟ್‌ ಅನುಮತಿಗೆ ಚೀನಾ ಕಿರಿಕ್ : ರಾಜ್ಯಕ್ಕೆ ಬಾರದ ಕೊರೋನಾ ಕಿಟ್

ಬೆಂಗಳೂರು: ರಾಜ್ಯಕ್ಕೆ ರವಾನೆಯಾಗಬೇಕಿರುವ ಕೊರೋನಾ ರೋಗ ನಿರೋಧಕ ಟೆಸ್ಟಿಂಗ್ ಕಿಟ್‌ಗಳು ಚೀನಾ ಏರ್‌ಪೋರ್ಟ್‌ನಲ್ಲೇ ಸ್ಥಗಿತಗೊಂಡಿದೆ !
ರಾಜ್ಯ ಸೇರಿದಂತೆ ಗುಜರಾತ್, ಆಂಧ್ರ , ಕೇರಳ ಸೇರಿದಂತೆ ಒಟ್ಟು ನಾಲ್ಕು ರಾಜ್ಯಗಳಿಗೆ ರವಾನೆಯಾಗಬೇಕಿರುವ ಸಾವಿರಾರು ಟೆಸ್ಟಿಂಗ್ ಕಿಟ್‌ಗಳು ಹಾಂಕ್‌ಕಾಂಗ್ ವಿಮಾನ ನಿಲ್ದಾಣದಲ್ಲಿಯೇ ಸ್ಥಗಿತಗೊಂಡಿರುವುದರಿಂದ ಕೋರೋನಾ ಸಮರದಲ್ಲಿ ತೊಡಗಿರುವ ದೇಶದ ವೈದ್ಯವೃಂದ ಕೈ ಕಟ್ಟಿಕುಳ್ಳುವಂತಾಗಿದೆ.
ಈ ಕಿಟ್‌ಗಳನ್ನು ಭಾರತಕ್ಕೆ ರವಾನಿಸಲು ಚೀನಾ ಸರ್ಕಾರದ ಅನುಮತಿ ಅಗತ್ಯ. ಆದರೆ ಈ ಅನುಮತಿ ನೀಡಲು ಚೀನಾ ಇನ್ನೂ ಮೀನ, ಮೆಷ ಎಣೆಸುತ್ತಿರುವುದರಿಂದ ಅಲ್ಲಿನ ವಿಮಾನ ನಿಲ್ದಾಣದಲ್ಲಿಯೇ ವೈದ್ಯ ಸಾಮಗ್ರಿ ಸ್ಥಗಿತಗೊಳ್ಳುವಂತಾಗಿದೆ. ಈ ಮೊದಲು ಚೀನಾ ಖಾಸಗಿ ಕಂಪನಿಗಳು ತಯಾರಿಸಿದ್ದ ಕಿಟ್ ರವಾನೆಗೆ ಇಲ್ಲಿನ ಸರ್ಕಾರ ಯಾವುದೇ ಕಟ್ಟುಪಾಡು ವಿಧಿಸಿರಲಿಲ್ಲ . ಆದರೆ ಬದಲಾದ ಸನ್ನಿವೇಶದಲ್ಲಿ ಚೀನಾ ಸರ್ಕಾರ ಕಿಟ್ ರವಾನೆಗೆ ಅನುಮತಿ ನೀಡದೆ ಸತಾಯಿಸುತ್ತಿರುವುದು ಕಳವಳಕಾರಿಯಾಗಿದೆ. ಈ ದಿಶೆಯಲ್ಲಿ ಕೇಂದ್ರ ವಿದೇಶಾಂಗ ಹಾಗೂ ಗೃಹ ಖಾತೆಯ ಅಧಿಕಾರಿಗಳೊಂದಿಗೆ ರಾಜ್ಯ ಸರ್ಕಾರ ಮಾತುಕತೆ ಮುಂದುವರಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss