Saturday, July 2, 2022

Latest Posts

ಹಾಟ್‌ ಸ್ಪಾಟ್ ‌ಗಳಲ್ಲೂ ನಿಯಮ ಉಲ್ಲಂಘನೆ: ರಾಜ್ಯಗಳಿಗೆ ಕೇಂದ್ರ ಗೃಹ ಇಲಾಖೆ ವಾರ್ನಿಂಗ್!

ಹೊಸದಿಲ್ಲಿ: ಲಾಕ್‌ ಡೌನ್ ಸಡಿಲಿಕೆ ವಿಚಾರದಲ್ಲಿ ತಮಗಿಷ್ಟ ಬಂದಂತೆ ತೀರ್ಮಾನ ಕೈಗೊಳ್ಳುವ ಹಾಗಿಲ್ಲವೆಂದು ಕೇಂದ್ರ ಗೃಹ ಇಲಾಖೆ ಎಲ್ಲ ರಾಜ್ಯಗಳಿಗೆ ಖಡಕ್ ಎಚ್ಚರಿಕೆ ನೀಡಿದೆ.

ದೇಶದ ಹಾಟ್‌ಸ್ಪಾಟ್‌ಗಳಲ್ಲಿ ಕೂಡಾ ಲಾಕ್‌ ಡೌನ್ ನಿಯಮಾವಳಿ ಉಲ್ಲಂಘನೆಯಾಗಿರುವುದನ್ನು ಕಂಡು ಕೇಂದ್ರ ಗೃಹ ಇಲಾಖೆ ತೀವ್ರ ಅಸಮಾಧಾನಗೊಂಡಿದೆ.

ಇಂದಿನಿಂದ ಕರ್ನಾಟಕವೂ ಸೇರಿದಂತೆ ಕೆಲ ರಾಜ್ಯಗಳಲ್ಲಿ ಲಾಕ್‌ ಡೌನ್ ಮಾರ್ಗಸೂತ್ರ ಸಡಿಲಗೊಂಡಿದ್ದು, ಕೇಂದ್ರ ಸರ್ಕಾರ ಈಗಾಗಲೇ ವಿಧಿಸಿರುವ ಷರತ್ತುಗಳನ್ನು ಯಾವುದೇ ಕಾರಣಕ್ಕೂ ಉಲ್ಲಂಘಿಸುವಂತಿಲ್ಲ ಎಂದು ಗೃಹ ಇಲಾಖೆ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ತುರ್ತು ಸಂದೇಶ ರವಾನಿಸಿದೆ.

ಮೇ 3ನೇ ತಾರೀಖಿನವರೆಗೆ ದೇಶದ ಎಲ್ಲ ಕಡೆ ಲಾಕ್‌ ಡೌನ್ ಮುಂದುವರಿದಿದ್ದು, ಮುಂದಿನ ಆದೇಶದವರೆಗೂ ಮಾರ್ಗಸೂಚಿಯನ್ನು ಪಾಲಿಸುವುದು ಅನಿವಾರ್ಯ ಎಂದೂ ಕೇಂದ್ರ ಎಚ್ಚರಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss