ಹಾಲಿವುಡ್‌ಗೂ ಲಗ್ಗೆಯಿಟ್ಟ ಕೊರೋನಾ: ನಟಿ ಕುರಿಲೆಂಕೊಗೆ ವೈರಸ್ ಅಟ್ಯಾಕ್

0
159

ಹೊಸದಿಲ್ಲಿ: ಉಕ್ರೇನಿಯನ್ ಮೂಲದ ಹಾಲಿವುಡ್ ನಟಿ ಓಲ್ಗಾ ಕುರಿಲೆಂಕೊ ಕೊರೋನಾ ವೈರಸ್ ನಿಂದ ಬಳಲುತ್ತಿದ್ದು, ಇದನ್ನು ಕೂದ್ದು ಆಕೆಯೇ ಹೇಳಿಕೊಂಡಿದ್ದಾರೆ.

ಭಾನುವಾರ ತನ್ನ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ನಟಿ ಓಲ್ಗಾ ಕುರಿಲೆಂಕೊ ತನಗೆ ಕೊರೊನಾ ಸೋಂಕು ಇದೆ ಎನ್ನುವುದನ್ನು ಬಹಿರಂಗ ಪಡಿಸಿದ್ದಾರೆ.

ಕಳೆದ ಒಂದು ವಾರದಿಂದ ನನಗೆ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಜ್ವರ ಹಾಗೂ ನಿಶ್ಯಕ್ತಿಯಿಂದ ಬಳಲುತ್ತಿದ್ದೆ. ವೈದ್ಯರ ಬಳಿ ಪರೀಕ್ಷಿಸಿದ ಬಳಿಕ ಕೊರೊನಾ ಸೋಂಕು ತಗುಲಿದ್ದು ದೃಢ ಪಟ್ಟಿದೆ. ನೀವು ಎಲ್ಲರೂ ಸುರಕ್ಷಿತವಾಗಿರಿ ಎಂದು ಅವರು ತಮ್ಮ ಅಭಿಮಾನಿಗಳಿಗೆ ಹಾರೈಸಿದ್ದಾರೆ.

2008 ರಲ್ಲಿ ಹಾಲಿವುಡ್ ನಟ ಜೇಮ್ಸ್ ಬಾಂಡ್ ನಟನೆಯ ಕ್ವಾಂಟಮ್ ಆಫ್ ಸೊಲೇಸ್ ಚಿತ್ರದಲ್ಲಿ ಕಾಣಿಸಿಕೊಂಡ ನಟಿ ಓಲ್ಗಾ ಕುರಿಲೆಂಕೊ ಬಳಿಕ 2013 ರಲ್ಲಿ ತೆರೆ ಕಂಡ ಒಬ್ ಲಿವಿನ್ ಚಿತ್ರದಲ್ಲಿ ಕೂಡಾ ಅಭಿನಯಿಸಿದ್ದರು.ಬಣ್ಣ ಹಂಚಿದ್ದರು. ಭಾನುವಾರ ತನ್ನ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ನಟಿ ಓಲ್ಗಾ ಕುರಿಲೆಂಕೊ ತನಗೆ ಕೊರೊನಾ ಸೋಂಕು ಇದೆ ಎನ್ನುವುದನ್ನು ಬಹಿರಂಗ ಪಡಿಸಿದ್ದಾರೆ.

ಕಳೆದ ವಾರ ನಟ ದಂಪತಿ ಟಾಮ್ ಹ್ಯಾಂಕ್ಸ್ ಹಾಗೂ ರೀಟಾ ವಿಲ್ಸನ್ ರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಇದೀಗ ನಟಿ ಓಲ್ಗಾ ಕುರಿಲೆಂಕೊರಲ್ಲಿ ಸೋಂಕು ಕಾಣಿಸಿಕೊಳ್ಳುವುದರ ಮೂಲಕ ಹಾಲಿವುಡ್‌ನಲ್ಲೂ ಕೊರೊನಾ ತಲ್ಲಣ ಮೂಡಿಸಿದೆ.

LEAVE A REPLY

Please enter your comment!
Please enter your name here