ರಸಗುಲ್ಲಾ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಮಕ್ಕಳಿಗಂತೂ ಬಹಳ ಇಷ್ಟ. ಕೆಲವೊಮ್ಮೆ ಹಾಲು ಕೆಟ್ಟು ಹೋಗಿ ಕುಸಿ ಕುಸಿಯಾಗುತ್ತದೆ. ಆಗ ನೀವು ಅದರಿಂದ ರಸಗುಲ್ಲ ತಯಾರಿಸಬಹುದು. ಹೇಗೆ ಅಂತೀರಾ? ಇಲ್ಲಿದೆ ರೆಸಿಪಿ
ಬೇಕಾಗುವ ಸಾಮಗ್ರಿ:
ಹಾಲು
ಸಕ್ಕರೆ
ಏಲಕ್ಕಿ
ಮಾಡುವ ವಿಧಾನ:
ಹಾಲು ಕೆಟ್ಟಾಗ ಅದು ಖೋವಾ ರೀತಿಯಾಗಿರುತ್ತದೆ. ಅದನ್ನು ಚೆನ್ನಾಗಿ ಅರಿಸಬೇಕು. ಹಾಲಿನ ನೀರು ಹೋಗಿ ಖೋವಾ ಮಾತ್ರ ಉಳಿಯುತ್ತದೆ. ಅದನ್ನು ಚಿಕ್ಕ ಚಿಕ್ಕ ಉಂಡೆ ಮಾಡಿಕೊಳ್ಳಬೇಕು. ಜಾಮುನಿಗೆ ಮಾಡುವ ಹದದಲ್ಲಿ ಸಕ್ಕರೆ ಪಾಕ ಮಾಡಿಕೊಂಡು ಈ ಉಂಡೆಗಳನ್ನು ಬೇಯಿಸಬೇಕು. ನಂತರ ಏಲಕ್ಕಿ ಪುಡಿ ಹಾಕಿದರೆ. ರಸಗುಲ್ಲಾ ರೆಡಿ. ಇದನ್ನು ಫ್ರೀಡ್ಜ್ನಲ್ಲಿ ಇಟ್ಟು ತಿನ್ನಬಹುದು.