Tuesday, June 28, 2022

Latest Posts

ಹಾವೇರಿಯಲ್ಲಿ ಕೋವಿಡ್ ಸೋಂಕಿನಿಂದ ಮೂರು ಜನ ಗುಣಮುಖ

ಹಾವೇರಿ: ಕೋವಿಡ್ ಸೋಂಕಿನಿಂದ ಮೂರು ಜನ ಗುಣಮುಖರಾಗಿದ್ದು ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಸೋಮವಾರ ಮುಕ್ತ ಗೊಳಿಸಲಾಯಿತು. ಚೇತರಿಕೆಗೆ ಆಸ್ಪತ್ರೆಯ ವೈದ್ಯರು ಹಾಗೂ ದಾದಿಯರು, ಅರೆವೈದ್ಯಕೀಯ ಸಿಬ್ಬಂದಿಗಳು ಚಪ್ಪಾಳೆ ಮೂಲಕ ಗುಲಾಬಿ ಹೂ ನೀಡಿ ಶುಭ ಹಾರೈಸಿದರು.
ಸವಣೂರ ಎಸ್.ಎಂ.ಕೃಷ್ಣ ನಗರದ ನಿವಾಸಿ ೫೫ ವರ್ಷದ ಮಹಿಳೆ (ಪಿ-೧೬೮೯), ಯಲವಿಗಿ ಗ್ರಾಮದ ೨೭ ವರ್ಷದ ಮಹಿಳೆ (ಪಿ-೧೬೯೦) ಹಾಗೂ ಬಂಕಾಪುರ ನಿವಾಸಿ ೨೨ ವರ್ಷದ ಚಾಲಕ(ಪಿ-೧೬೯೧) ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರಾಗಿದ್ದಾರೆ.
ಇವರನ್ನು ಸರ್ಕಾರಿ ಅಂಬ್ಯಲೆನ್ಸ್ ಮೂಲಕ ಅವರವರ ಮನೆಗಳಿಗೆ ಕಳುಹಿಸಲಾಗಿದೆ. ಬಿಡುಗಡೆಯಾದ ಕೃಷ್ಣಾನಗರದ ನಿವಾಸಿ ಮಹಿಳೆಗೆ ಯಾವುದೇ ಪ್ರವಾಸ ಹಿನ್ನಲೆ ಇರಲಿಲ್ಲ. ಬಂಕಾಪುರ ಹಾಗೂ ಯಲವಿಗಿಯ ಸೋಂಕಿತರಿಗೆ ಮುಂಬೈ ಪ್ರವಾಸ ಹಿನ್ನಲೆ ಹೊಂದಿದವರಾಗಿದ್ದರು. ಗಂಟಲು ದ್ರವ್ಯ ಪರೀಕ್ಷೆ ಯಲ್ಲಿ ಇವರಿಗೆ ಕೊರೋನಾ ಸೋಂಕು ಕಂಡುಬಂದಿತ್ತು.
ಗುಣಮುಖರಾಗಿ ಸೋಮವಾರ ಬಿಡುಗಡೆ ಹೊಂದಿದ ಪಿ-೧೬೮೯ ಸವಣೂರ ಪಟ್ಟಣದ ಕಂಟೈನ್ಮೆಂಟ್ ಏರಿಯಾದ ಎಸ್.ಎಂ.ಕೃಷ್ಣನಗರದ ನಿವಾಸಿಯಾಗಿದ್ದರು. ಪಿ-೧೬೯೦ ೨೭ ವರ್ಷದ ಮಹಿಳೆ ಸವಣೂರ ತಾಲೂಕು ಯಲವಗಿ ಗ್ರಾಮದ ನಿವಾಸಿ ಬಿ.ಎಸ್ಸಿ ನರ್ಸಿಂಗ್ ವ್ಯಾಸಂಗ ಮುಗಿಸಿ ಸಿ.ಎಚ್.ಓ  ತರಬೇತಿಗಾಗಿ ಮುಂಬೈನಲ್ಲಿದ್ದ ಈ ಮಹಿಳೆ ಸೇವಾ ಸಿಂಧು ಪಾಸ್ ಪಡೆದು ಹಾವೇರಿಗೆ ಮೇ ೧೯ ರಂದು ಆಗಮಿಸಿದ್ದರು. ಪಿ-೧೬೯೧ ೨೨ ವರ್ಷದ ವ್ಯಕ್ತಿ ಚಾಲಕ ಬಂಕಾಪುರ ನಿವಾಸಿಯಾಗಿದ್ದಾನೆ. ಈ ವ್ಯಕ್ತಿ ಬಂಕಾಪುರದಿಂದ ಮೆಣಸಿನಕಾಯಿ ಲೋಡ್‌ನ್ನು ತೆಗೆದುಕೊಂಡು ಮೂರು ಬಾರಿ ಮುಂಬೈನ ವಾಸಿಯ ಮಾರುಕಟ್ಟೆಯ ಕೋಲ್ಡ್ ಸ್ಟೋರೇಜ್‌ಗೆ ಹೋಗಿಬಂದಿದ್ದ. ಮೇ ೨೨ ರಂದು ಈ ಮೂವರಿಗೆ ಕೋವಿಡ್ ಸೋಂಕು ದೃಢಪಟ್ಟ ವರದಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಡಾ.ಸುರೇಶ ಪೂಜಾರ ಮಾತನಾಡಿ, ಈಗಾಗಲೇ ಆರು ಜನ ಸೊಂಕಿತರು ಗುಣಮುಖರಾದ್ದು, ಉಳಿದವರು ಶೀಘ್ರದಲ್ಲಿಯೇ ಗುಣಮುಖರಾಗಲಿದ್ದು ಅವರ ಕೊನೆಯ ವರದಿ ಬಂದ ನಂತರ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೊರೋನಾ ನೋಡಲ್ ಅಧಿಕಾರಿ ಡಾ.ವಿಶ್ವನಾಥ ಸಾಲಿಮಠ, ಡಾ.ಎಲ್.ಎಲ್ ರಾಥೋಡ, ಡಾ. ನಿರಂಜನ, ಪ್ರಭಾರ ನರ್ಸಿಂಗ್ ಅಧಿಕ್ಷಿ ರಾಜೇಶ್ವರಿ ಭಟ್, ಆಸ್ಪತ್ರೆಯ ಸಿಬ್ಬಂಧಿಗಳು, ವೈದ್ಯರು ಸೇರಿದಂತೆ ಮತ್ತಿತರರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss