Tuesday, June 28, 2022

Latest Posts

 ಹಾವೇರಿಯಲ್ಲಿ 111 ಜನರಲ್ಲಿ ಕೊರೋನಾ ಸೋಂಕು ದೃಢ, 42 ಜನರು ಗುಣಮುಖ

 ಹಾವೇರಿ: ವೈದ್ಯ, ಆಶಾ ಕಾರ್ಯಕರ್ತೆ, ಶಿಕ್ಷಣ, ಆರೋಗ್ಯ ಇಲಾಖೆ ಸಿಬ್ಬಂದಿಗಳು ಸೇರಿ ಜಿಲ್ಲೆಯಲ್ಲಿ ಗುರುವಾರ ೧೧೧ ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ, ೪೨ ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ೨೮೮೩ ಜನರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಇಂದಿನವರೆಗೆ ೧೭೮೬ ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಹೊಂದಿದ್ದಾರೆ ಹಾಗೂ ಇಂದಿನ ನಾಲ್ಕು ಮರಣ ಪ್ರಕರಣ ಸೇರಿ ಒಟ್ಟಾರೆ ೬೬ ಜನರು ಕೊರೋನಾದಿಂದ ಮೃತಪಟ್ಟಿದ್ದಾರೆ. ೧೦೩೧ ಸಕ್ರಿಯ ಪ್ರಕರಣಗಳಿವೆ(೫೭೫ ಸೋಂಕಿತರು ಹೋಂ ಐಸೋಲೇಷನ್‌ನಲ್ಲಿ ಹಾಗೂ ೪೫೬ ಸೋಂಕಿತರು ಕೋವಿಡ್ ಕೇರ್ ಆಸ್ಪತ್ರೆ, ಕೋವಿಡ್ ಕೇರ್‌ಹೆಲ್ತ್ ಸೆಂಟರ್, ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ).
ಸವಣೂರು ತಾಲೂಕಿನಲ್ಲಿ ೧೦, ಶಿಗ್ಗಾಂವ ೧೫, ರಾಣೇಬೆನ್ನೂರು ೧೯, ಹಾವೇರಿ ೩೦, ಬ್ಯಾಡಗಿ, ಹಾನಗಲ್ ತಲಾ ೧೩, ಹಿರೇಕೆರೂರು ತಾಲೂಕಿನಲ್ಲಿ ೧೧ ಜನರಿಗೆ ಸೋಂಕು ದೃಢಪಟ್ಟಿದೆ.
ಸವಣೂರು ತಾಲೂಕಿನಲ್ಲಿ ೭, ಹಿರೇಕೆರೂರ, ಶಿಗ್ಗಾಂವ ಹಾಗೂ ರಾಣೇಬೆನ್ನೂರು ತಲಾ ೫, ಹಾವೇರಿ ೧೮, ಬ್ಯಾಡಗಿ ತಾಲೂಕಿನ ಓರ್ವರು ಹಾಗೂ ಇತರೆ ಓರ್ವರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.
ಹಾವೇರಿಯ ಬಸವೇಶ್ವರನಗರದ ೫೨ ವರ್ಷದ ಪುರುಷ. ಸವಣೂರ ತಾಲೂಕು ಹುರಳಿಕೊಪ್ಪಿಯ ೭೧ ವರ್ಷದ ಪುರುಷ, ರಟ್ಟಿಹಳ್ಳಿಯ ೫೦ ವರ್ಷದ ಪುರುಷ ಹಾಗೂ ಹಾವೇರಿ ತಾಲೂಕು ಕುಳೇನೂರ ಗ್ರಾಮದ ೫೫ ವರ್ಷದ ಪುರುಷ ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss