Wednesday, July 6, 2022

Latest Posts

ಹಾವೇರಿ| ಆರು ಜನರಿಗೆ ಕೋವಿಡ್ ಸೋಂಕು, ಓರ್ವ ಮರಣ, 33 ಜನರು ಗುಣಮುಖರಾಗಿ ಬಿಡುಗಡೆ

ಹಾವೇರಿ: ಜಿಲ್ಲೆಯಲ್ಲಿ ಕೋವಿಡ್ ಆರು ಜನರಲ್ಲಿ ದೃಢಪಡುವ ಮೂಲಕ ಸೋಂಕಿತರ ಪ್ರಮಾಣ ಕಡಿಮೆ ಆಗಿದೆ. ಒಬ್ಬರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ೩೩ ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ೩೦೮ ಕೋವಿಡ್ ಪ್ರಕರಣಗಳು ದೃಢಗೊಂಡಿವೆ. ಇಂದಿನವರೆಗೆ ೧೭೦ ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಹೊಂದಿದ್ದಾರೆ ಹಾಗೂ ಇಂದಿನ ಪ್ರಕರಣಗಳು ಸೇರಿ ಈವರೆಗೆ ಏಳು ಜನರು ಮೃತಪಟ್ಟಿದ್ದಾರೆ. ೧೩೧ ಪ್ರಕರಣಗಳು ಸಕ್ರಿಯವಾಗಿವೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಿಳಿಸಿದ್ದಾರೆ.
ಜಿಲ್ಲೆಯ ಸವಣೂರಿನ ಮಾಸೂರ ನಗರದ ೪೫ ವರ್ಷದ ಪುರುಷ (ಎಚ್.ವಿ.ಆರ್.೩೦೩) ತೀವ್ರ ಜ್ವರ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಇವರು ಚಿಕಿತ್ಸೆಗಾಗಿ ದಿ.೯ ರಂದು ದಾಖಲಾಗಿದ್ದರು ಇವರು ಇಕಿತ್ಸೆ ಫಲಕಾರಿಯಾಗದೇ ದಿ.೧೦ ರಂದು ಮರಣ ಹೊಂದಿರುತ್ತಾರೆ. ಇವರ ಗಂಟಲು ದ್ರವದ ಪ್ರಯೋಗಾಲಯದ ವರದಿ ದಿ.೧೨ ರಂದು ಪಾಸಿಟಿವ್ ಎಂದು ದೃಡಪಟ್ಟಿರುತ್ತದೆ.
ಪಿ-೧೪೬೧೪, ಪಿ-೧೪೬೧೫, ಪಿ-೨೩೨೧೯, ಪಿ-೨೩೨೨೦, ಪಿ-೧೯೯೪೯, ಪಿ-೧೯೯೪೪, ಪಿ-೧೯೯೫೦, ಪಿ-೧೯೯೪೧, ಪಿ-೧೯೯೪೭, ಪಿ-೨೩೨೨೫, ಪಿ-೨೪೭೩೬, ಪಿ-೨೪೭೩೪, ಪಿ-೨೪೭೩೧, ಪಿ-೨೪೭೩೨, ಪಿ-೨೪೭೩೩, ಪಿ-೨೪೭೩೫, ಪಿ-೨೮೩೮೪, ಪಿ-೨೮೩೮೨, ಪಿ-೨೮೩೮೩, ಪಿ-೨೩೨೧೫, ಪಿ-೨೮೩೭೮, ಪಿ-೨೮೩೯೩, ಪಿ-೨೮೩೯೦, ಪಿ-೨೮೩೮೩, ಪಿ-೨೮೩೯೨, ಪಿ-೨೮೩೮೭, ಪಿ-೨೮೩೭೯, ಪಿ-೨೮೩೮೧, ಪಿ-೧೯೯೫೨, ಪಿ-೨೮೩೮೯, ಪಿ-೨೮೩೯೧, ಪಿ-೨೮೩೮೦, ಪಿ-೨೮೩೮೮ ಮೂವತ್ತಮೂರು ಸೋಂಕಿತರು ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
೦-೦-೦-೦-೦

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss