Wednesday, August 10, 2022

Latest Posts

ಹಾವೇರಿ| ಆರೋಗ್ಯದ ಕೇಂದ್ರದ ಡಿ ದರ್ಜೆ ನೌಕರ ಸಹಿತ 80 ಜನರಲ್ಲಿ ಕೊರೋನಾ ಸೋಂಕು ದೃಢ

ಹಾವೇರಿ: ಜಿಲ್ಲೆಯ ಸವಣೂರ ಆರೋಗ್ಯದ ಕೇಂದ್ರದ ಡಿ ದರ್ಜೆ ನೌಕರ ಸೇರಿದಂತೆ ಒಟ್ಟು ೮೦ ಜನರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು ಓರ್ವರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ ತಿಳಿಸಿದ್ದಾರೆ.
ಜಿಲ್ಲೆಯ ಬ್ಯಾಡಗಿ ತಾಲೂಕಿನಲ್ಲಿ ೩, ಹಾನಗಲ್ ೪, ಹಾವೇರಿ ೨೩, ಹಿರೇಕೆರೂರ ೧೮, ರಾಣೇಬೆನ್ನೂರ ೧೯, ಸವಣೂರ ೧೦ ಹಾಗೂ ಶಿಗ್ಗಾಂವ ತಾಲೂಕಿನಲ್ಲಿ ೩ ಜನರು ಸೇರಿ ೮೦ ಜನರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ.
ಹಾವೇರಿ ನಗರದ ಕೊರವರ ಓಣಿಯ ೫೬ ವರ್ಷದ ವ್ಯಕ್ತಿಯವರು ಜಿಲ್ಲಾ ಕೊವೀಡ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಜಿಲ್ಲೆಯಲ್ಲಿ ಈವರಗೆ ೧೮೪೪ ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದರೆ ೧೦೨೨ ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ೨೦೧ ಹೋಂ ಐಸೋಲೇಷನ್‌ದಲ್ಲಿದ್ದರೆ, ೭೮೬ ಜನರಲ್ಲಿ ಇನ್ನು ಸೋಂಕು ಸಕ್ರೀಯವಾಗಿದೆ. ೫೮೫ ಜನರು ಡಿಸಿಹೆಚ್, ಡಿಸಿಡಿಹಚ್ ಹಾಗೂ ಸಿಸಿಸಿ ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss