Sunday, July 3, 2022

Latest Posts

ಹಾವೇರಿ| ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆ, ಇಬ್ಬರು ಪೊಲೀಸರು ಸಹಿತ ಬರೋಬ್ಬರಿ 56 ಜನರಲ್ಲಿ ಸೋಂಕು

ಹಾವೇರಿ: ಕೊರೋನಾ ಮಾಹಾಮಾರಿ ಜಿಲ್ಲೆಯಲ್ಲಿ ಬರೋಬ್ಬರಿ ೫೬ ಜನರಲ್ಲಿ ಕಾಣಿಸಿಕೊಂಡಿದೆ. ರಾಣೇಬೆನ್ನೂರ ತಾಲೂಕೊಂದರಲ್ಲೆ ೩೬ ಜನರನ್ನು ಆವರಿಸಿಕೊಳ್ಳುವ ಮೂಲಕ ತನ್ನ ಅಟ್ಟಹಾಸವನ್ನು ಮೆರೆದಿದೆ.
ಶುಕ್ರವಾರ ಜಿಲ್ಲೆಯಲ್ಲಿ ಅಶುಭವಾಗಿ ಪರಿಣಮಿಸಿದೆ. ಇಂದು ಜಿಲ್ಲೆಯ ರಾಣೇಬೆನ್ನೂರ ತಾಲೂಕಿನ ನಂತರದಲ್ಲಿ ಹಾವೇರಿ ತಾಲೂಕಿನಲ್ಲಿ ೧೨ ಮತ್ತು ಶಿಗ್ಗಾಂವ್ ತಾಲೂಕಿನಲ್ಲಿ ೮ ಪ್ರಕರಣಗಳು ಕಂಡುಬಂದಿವೆ. ಈ ಮೊದಲು ಜಿಲ್ಲೆಯ ಶಿಗ್ಗಾಂವ್, ಸವಣೂರ, ಹಾನಗಲ್ ಮತ್ತು ಹಿರೇಕೆರೂರ ತಾಲೂಕುಗಳಲ್ಲಿ ಮಾತ್ರ ಅಧಿಕ ಕೊರೋನಾ ಪ್ರಕರಣಗಳು ಕಂಡುಬರುತ್ತಿದ್ದವು. ಆದರೆ ಈಗ ಹಾವೇರಿ ಮತ್ತು ರಾಣೇಬೆನ್ನೂರ ತಾಲೂಕುಗಳಲ್ಲಿ ಅಧಿಕ ಪ್ರಕರಣಗಳು ಕಂಡುಬರುವ ಮೂಲಕ ಜಿಲ್ಲೆವ್ಯಾಪಿ ಪ್ರಸರಿಸುವ ಸ್ಪಷ್ಟ ಲಕ್ಷಣವನ್ನು ತೋರಿಸಲಾರಂಭಿಸಿದೆ.
ಜಿಲ್ಲೆಯಲ್ಲಿ ಇವರೆಗೆ ೩೯೦ ಜನರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಇವರಲ್ಲಿ ೨೭೫ ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಶುಕ್ರವಾರ ೩೧ ಜನರು ಬಿಡುಗಡೆ ಆಗಿದ್ದರೆ ಇನ್ನು ೧೦೮ ಜನರಲ್ಲಿ ಕೊರೋನಾ ಸೋಂಕು ಸಕ್ರೀಯವಾಗಿದೆ. ಇಂದಿನವರೆಗೆ ಜಿಲ್ಲೆಯಲ್ಲಿ ೭ ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ಇಬ್ಬರಿಗೆ ಐ.ಸಿ.ಯುದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಾವೇರಿ ೧೬, ಶಿಗ್ಗಾಂವ ಹಾಗೂ ಹಾನಗಲ್ ತಾಲೂಕಿನ ತಲಾ ನಾಲ್ಕು ಮತ್ತು ಬ್ಯಾಡಗಿ ತಾಲೂಕಿನ ೩ ಜನರು ಸೇರಿ ಒಟ್ಟು ೩೧ ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಗುತ್ತಲದ ಪಿ-೧೪೬೦೫ ಪ್ರಾಥಮಿಕ ಸಂಪರ್ಕಿತರಾದ ೪೦ ವರ್ಷದ ಕಿರಿಯ ಆರೋಗ್ಯ ಸಹಾಯಕ (ಪಿ-೫೨೩೨೯) ಹಾಗೂ ೩೪ ವರ್ಷದ ಕಿರಿಯ ಆರೋಗ್ಯ ಸಹಾಯಕಿ (ಪಿ-೫೨೩೬೫), ಪಿ-೧೪೬೦೫ರ ಸಂಪರ್ಕಿತೆ ಗುತ್ತಲದ ೩೬ ವರ್ಷದ ಆಶಾ ಕಾರ್ಯಕರ್ತೆ(ಪಿ-೫೨೩೭೭), ತುಮಕೂರು ಪ್ರವಾಸ ಹಿನ್ನೆಲೆ ಹೊಂದಿರುವ ಶಿಗ್ಗಾಂವಿಯ ಕೆ.ಎಸ್.ಆರ್.ಪಿ.ಸಿ. ಪೊಲೀಸರಾದ ೪೨ ವರ್ಷದ ಪುರುಷ(ಪಿ-೫೨೪೧೦) ಹಾಗೂ ೪೧ ವರ್ಷದ ಪುರುಷ(ಪಿ-೫೨೪೩೪)ಯಲ್ಲಿ ಕೋವಿಡ್ ದೃಢಪಟ್ಟಿದೆ.
ಬೆಂಗಳೂರು ಪ್ರವಾಸ ಹಿನ್ನೆಲೆ ಹೊಂದಿದ ರಾಣೇಬೆನ್ನೂರಿನ ಮಾರುತಿ ನಗರದ ೨೬ ವರ್ಷದ ಯುವಕ(ಪಿ-೫೨೬೦೩) ಹಾಗೂ ಪಿ-೨೫೮೩೦ ಈ ಇಬ್ಬರ ಪ್ರಾಥಮಿಕ ಸಂಪರ್ಕದಿಂದ ರಾಣೇಬೆನ್ನೂರಿನಲ್ಲಿ ೩೫ ಜನರಲ್ಲಿ ಕೊರೋನಾ ದೃಢ ಪಟ್ಟಿದೆ. ಇದರಿಂದ ಜಿಲ್ಲೆಯಾದ್ಯಂತ ಭುದ ವಾತಾವರಣ ನಿರ್ಮಾಣವಾಗಿದೆ. ಬೇರೆ ಗ್ರಾಮ ಮತ್ತು ಊರುಗಳಿಂದ ಬಂದವರನ್ನು ಜನತೆ ಭಯದಿಂದಲೇ ವಾತಾವರಣ ಸೃಷ್ಠಿಯಾಗಿದೆ.
ಈ ಹಿಂದೆ ಮಹಾರಾಷ್ಟ್ರದಿಂದ ಬಂದವರನ್ನು ಮಾತ್ರ ಭಯದಿಂದ ನೋಡಲಾಗುತ್ತಿತ್ತು ಆದರೆ ಪ್ರಸಕ್ತ ಬೆಂಗಳೂರಿನಿಂದ ಬಂದವರನ್ನು ಸಹ ಭಯದಿಂದ ನೋಡುವ ಸ್ಥಿತಿ ನಿರ್ಮಾನವಾಗಿದೆ ಎಂದರೂ ತಪ್ಪಾಗಲಾರದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss