ಹಾವೇರಿ: ಕೋವಿಡ್ನಿಂದ ಗುಣಮುಖರಾಗಿ ಸೋಮವಾರ ಐದು ಜನ ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಈವರೆಗೆ 21 ಸೋಂಕಿತರ ಪೈಕಿ 11 ಜನ ಬಿಡುಗಡೆಹೊಂದಿದ್ದಾರೆ. ೧೦ ಪ್ರಕರಣ ಸಕ್ರಿಯವಾಗಿವೆ.
ಶಿಗ್ಗಾಂವ ಮೂಲದ ೫೭ ವರ್ಷದ ಪಿ- ೩೨೭೧, ತುಮ್ಮಿಕಟ್ಟಿ ಮೂಲದವರಾದ ೧೯ ವರ್ಷದ ಪಿ- ೨೮೫೬, ೧೫ ವರ್ಷದ ಪಿ- ೨೮೫೮, ೧೧ ವರ್ಷದ ಪಿ- ೨೮೫೯ ಹಾಗೂ ೧೩ ವರ್ಷದ ಪಿ- ೨೮೫೭ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಈ ಎಲ್ಲರೂ ಮಹಾರಾಷ್ಟ್ರ ರಾಜ್ಯದಿಂದ ಹಾವೇರಿ ಜಿಲ್ಲೆಗೆ ಬಂದು ಸಾಂಸ್ಥಿಕ ಕ್ವಾರಂಟೈನ್ಗೆ ಒಳಗಾಗಿದ್ದರು.