Wednesday, August 10, 2022

Latest Posts

ಹಾವೇರಿ| ಕೊರೋನಾ ಸೋಂಕಿತ ವ್ಯಕ್ತಿ ಗುಣಮುಖ: ಆಸ್ಪತ್ರೆಯಿದ ಬಿಡುಗಡೆ

ಹಾವೇರಿ: ಕೊರೋನಾ ಸೋಂಕು ದೃಢಪಟ್ಟಿದ್ದ ನಾಲ್ವತ್ತು ವರ್ಷದ ವ್ಯಕ್ತಿ ಪಿ.672 ವ್ಯಕ್ತಿ ಗುಣಮುಖ ಹಿನ್ನೆಲೆ, ಕೋವಿಡ್-19 ಆಸ್ಪತ್ರೆಯಿಂದ ಶನಿವಾರ ಅವರನ್ನು ಬಿಡುಗಡೆ ಮಾಡಲಾಯಿತು.

ಜಿಲ್ಲೆಯ ಸವಣೂರಿನ ಎಸ್.ಎಂ.ಕೃಷ್ಣ ಬಡಾವಣೆಯ ನಿವಾಸಿಯಾಗಿದ್ದ ಇವರು ಮೇ 5ರಂದು ಕೊರೊನಾ ಸೊಂಕು ದೃಢಪಟ್ಟಿದ್ದರಿಂದ ಕೋವಿಡ್-19 ಆಸ್ಪತ್ರೆಗೆ ದಾಖಲಾಗಿದ್ದ ಪಿ.672. ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಅವರ ವರದಿ ನೆಗಟಿವ್ ಬಂದಿದ್ದರಿಂದ ಬಿಡುಗಡೆ ಮಾಡಲಾಯಿತು.

ಜಿಲ್ಲಾ ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂಧಿಗಳು ಹಾಗೂ ಸಾರ್ವಜನಿಕರು ಹೂ ಕೊಟ್ಟು, ಚಪ್ಪಾಳೆ ತಟ್ಟಿ ಆಸ್ಪತ್ರೆಯಿಂದ ಬಿಡುಗಡೆ ಮಾಡಿದರು. ಜಿಲ್ಲೆಯಲ್ಲಿ ಕೋವಿಡ್-19 ದೃಢ ಪಟ್ಟ ಎರಡನೇ ವ್ಯಕ್ತಿ ಇವರಾಗಿದ್ದಾರೆ. ಕೊರೋನಾ ಸೋಂಕು ತಗುಲಿರುವ ವ್ಯಕ್ತಿಯಾದ ಇವನ ಸಹೋದರ ಪಿ.639 ವ್ಯಕ್ತಿಯ ಪ್ರಯೋಗಾಲಯದ ವರದಿ ಬರಬೇಕಷ್ಟೆ. ಅಧಿಕಾರಿಗಳ ಪ್ರಕಾರ ಈ ವ್ಯಕ್ತಿಯಲ್ಲಿಯೂ ಕೋವಿಡ್-19 ಗುಣಮುಖವಾಗಿದೆ ಎಂದು ಹೇಳಲಾಗುತ್ತದೆ.

ಇವರು ಮುಂಬೈಯಿಂದ ಏ.28 ರಂದು ಟ್ರಕ್ ಮೂಲಕ ಸವಣೂರಿಗೆ ಆಗಮಿಸಿದ್ದರು. ಸಾರ್ವಜನಿಕರ ಮಾಹಿತಿ ಮೇರೆಗೆ ಇವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗ ಇವರು ಮತ್ತು ಇವರ ಸಹೋದರನಿಗೆ ಕೋವಿಡ್-19 ಇರುವುದು ದೃಢಪಟ್ಟಿತ್ತು.

ಗುಣಮುಖರಾದ ವ್ಯಕ್ತಿಯನ್ನು ಸವಣೂರಿಗೆ ಅಂಬ್ಯುಲೆನ್ಸ್ ಮೂಲಕ ಕಳಿಸಿಕೊಡಲಾಯಿತು. ಮನೆಗೆ ಕಳಿಸುವ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂಧಿಗಳು 14 ದಿನಗಳ ಕಾಲ ಹೋಂ ಕ್ವಾರಂಟೈನ್ ನಲ್ಲಿ ಇರುವಂತೆ ಹೇಳಿ ಕಳಿಸಿದರು. ಈ ವ್ಯಕ್ತಿ ಏನೋ ಕೋವಿಡ್-19 ದಿಂದ ಗುಣಮುಖನಾದ ಆದರೆ ಇವರು ವಾಸಿಸುವ ಮನೆಯ ಪಕ್ಕದ ಮನೆಯಲ್ಲಿನ ಮಹಿಳೆಗೆ ಕೋವಿಡ್-19 ಇರುವುದು ಶುಕ್ರವಾರವಷ್ಟೇ ದೃಢ ಪಟ್ಟಿರುವುದು ವಿಪರ್ಯಾಸದ ಸಂಗತಿ.

ಈ ಸಂದರ್ಭದಲ್ಲಿ ಡಿಹೆಚ್ಓ ಡಾ. ರಾಜೇಂದ್ರ ದೊಡ್ಡಮನಿ, ಪ್ರಭಾರ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಪಿ.ಆರ್.ಹಾವನೂರ, ಚಿಕಿತ್ಸೆ ನೀಡಿದ ವೃದ್ಯ ಡಾ. ವಿಶ್ವನಾಥ ಸಾಲೀಮಠ, ಆರ್.ಎಂ.ಓ ಡಾ. ಪೂಜಾರ ಹಾಗೂ ಇತರರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss