ಹಾವೇರಿ| ಕೋವಿಡ್ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಮೂವರಲ್ಲಿ ಓರ್ವ ಗುಣಮುಖ

0
29

ಹಾವೇರಿ:  ಮುಂಬೈನಿಂದ ಜಿಲ್ಲೆಗೆ ಆಗಮಿಸಿ ಕೋವಿಡ್ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಮೂವರಲ್ಲಿ ಓರ್ವ ಗುಣಮುಖನಾಗಿದ್ದಾನೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ. ಸೋಂಕಿತರ ಪೈಕಿ ಜಿಲ್ಲೆಯ ಸವಣೂರಿನ ಎಸ್.ಎಂ.ಕೃಷ್ಣ ನಗರದ ಪಿ-೬೭೨ ವ್ಯಕ್ತಿಯು ನಿಗಧಿತ ತಪಾಸಣೆ ಹಾಗೂ ಚಿಕಿತ್ಸೆಯಿಂದ ಕೋವಿಡ್ ಸೋಂಕಿನಿಂದ ಗುಣಮುಖನಾಗಿದ್ದಾನೆ. ೧೪ ದಿನ ಆಸ್ಪತ್ರೆಯಲ್ಲಿದ್ದ ಈ ವ್ಯಕ್ತಿಯೂ ಶನಿವಾರ ನಿಗಧಿತ ಆಸ್ಪತ್ರೆಯಿಂದ ಬಿಡುಗಡೆ ಹೊಂದಲಿದ್ದಾನೆ. ಆದಾಗ್ಯೂ ಈ ವ್ಯಕ್ತಿಯನ್ನು ಮುಂದಿನ ೧೪ ದಿವಸ ಗೃಹ ಪ್ರತ್ಯೇಕತೆಯಲ್ಲಿರಿಸಿ ವೈದ್ಯಕೀಯ ನಿಗಾವಹಿಸಲಾಗುವುದು. ಇನ್ನೋರ್ವ ವ್ಯಕ್ತಿ ಪಿ-೬೩೯ ವ್ಯಕ್ತಿಯ ಮೂರನೇ ಲ್ಯಾಬ್ ವರದಿ ಬರಬೇಕಾಗಿದೆ ಎಂದು ತಿಳಿಸಿರುವರು.
ಸವಣೂರ ಪಟ್ಟಣದ ಎಸ್.ಎಂ.ಕೃಷ್ಣನಗರವನ್ನು ಈಗಾಗಲೇ ಕಂಟೈನ್‌ಮೆಂಟ್ ಜೋನ್ ಎಂದು ಘೋಷಿಸಲಾಗಿದೆ. ಯಲವಿಗಿ ಗ್ರಾಮ ಹಾಗೂ ಬಂಕಾಪುರ ಪಟ್ಟಣದ ಸೋಂಕಿತರ ಮನೆ ಸುತ್ತಮುತ್ತಲಿನ ೧೦೦ ಮೀಟರ್ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ ಹಾಗೂ ೭ಕಿ.ಮೀ. ವ್ಯಾಪ್ತಿಯಲ್ಲಿ ಬಫರ್ ಝೋನ್ ಎಂದು ಗುರುತಿಸಲಾಗಿದೆ. ಸವಣೂರು ಹಾಗೂ ಶಿಗ್ಗಾಂವ ತಾಲೂಕಾ ತಹಶೀಲ್ದಾರ ಅವರನ್ನು ಇನ್ಸಡೆಂಟ್ ಕಮಾಂಡರ್ ಎಂದು ನೇಮಿಸಲಾಗಿದೆ.
ಸೀಲ್‌ಡೌನ್ ಪ್ರದೇಶಕ್ಕೆ ಒಳಹೋಗಲು ಹಾಗೂ ಹೊರ ಬರಲು ಒಂದೇ ಗೇಟ್‌ನ್ನು ನಿಗಧಿಪಡಿಸಲಾಗಿದೆ. ಸೀಲ್‌ಡೌನ್ ಪ್ರದೇಶದ ಜನರಿಗೆ ಮನೆ ದಿನಬಳಕೆ ವಸ್ತುಗಳನ್ನು ಮನೆ ಮನೆಗೆ ವಿತರಿಸಲು ಕ್ರಮವಹಿಸಲಾಗಿದೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here