Saturday, July 2, 2022

Latest Posts

ಹಾವೇರಿ| ಕ್ವಾರಂಟೈನ್ ಕೇಂದ್ರಗಳಲ್ಲಿ ಸೌಲಭ್ಯಗಳಿಲ್ಲದೆ ಪರದಾಡುತ್ತಿರುವ ಜನತೆ: ಬೇಕಾಗಿದೆ ಸೂಕ್ತ ವ್ಯವಸ್ಥೆ!

ಹಾವೇರಿ: ಕೋವಿಡ್ ಮಾಹಾಮಾರಿ ತಡೆಗೆ ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ ಕ್ವಾರಂಟೈನ್ ಕೇಂದ್ರಗಳಲ್ಲಿ ಮತ್ತು ಕೋವಿಡ್ ಚಿಕಿತ್ಸಾ ಕೇಂದ್ರಗಳಲ್ಲಿ ಸಮರ್ಪಕ ವ್ಯವಸ್ಥೆಗಳಿಲ್ಲದೆ ಈ ಕೇಂದ್ರಗಳಿಗೆ ದಾಖಲಾದವರು ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ.
ಕೋವಿಡ್ ದೃಢ ಪಟ್ಟಿ ವ್ಯಕ್ತಿಗಳ ಪ್ರಥಮ ಮತ್ತು ದ್ವಿತಿಯ ಹಂತದಲ್ಲಿ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ ಕೇಂದ್ರಗಳಲ್ಲಿ ಇಟ್ಟು ಅವರ ಗಂಟಲಯ ದ್ರವ ಪರೀಕ್ಷೆ ಮಾಡಿದ ನಂತರ ಅವರಲ್ಲಿ ಕೋವಿಡ್ ಇದೆಯೋ ಇಲ್ಲವೋ ಎನ್ನುವುದನ್ನು ಖಾತರಿ ಪಡಿಸಿಕೊಂಡ ನಂತರದಲ್ಲಿ ಅವರನ್ನು ಕೋವಿಡ್ ಆಸ್ಪತ್ರೆ ಇಲ್ಲವೆ ಮನೆಗೆ ಕಳಿಸುವ ನಿರ್ಧಾರವನ್ನು ಮಾಡಲಾಗುತ್ತದೆ.
ಕ್ವಾರಂಟೈನ್ ಕೇಂದ್ರಗಳಲ್ಲಿರುವವರ ಗಂಟಲು ದ್ರವ ಪರೀಕ್ಷೆಯ ವರದಿ ಬರುವುದಕ್ಕೆ ಪ್ರಸಕ್ತ ೮-೧೦ ದಿನಗಳಾಗುತ್ತಿದೆ ಇದು ಬಹಳ ವಿಳಂವಾಗುತ್ತಿದೆ. ಪ್ರಯೋಗಾಲಯದ ವರದಿ ಬಂದ ನಂತರ ವರದಿಯಲ್ಲಿ ದೃಢ ಪಟ್ಟರೆ ಕೋವಿಡ್ ಆಸ್ಪತ್ರೆಗೆ, ಇಲ್ಲವಾದರೆ ಮನೆಗೆ ಕಳಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಇವರೆಗೆ ಒಟ್ಟು ೨೩ ಕ್ವಾರಂಟೈನ್ ಕೇಂದ್ರಗಳನ್ನು ತೆರೆಯಲಾಗಿದೆ. ಇವುಗಳಲ್ಲಿ ಬಹುತೇಕ ಕೇಂದ್ರಗಳಲ್ಲಿ ಸಮರ್ಪಕ ಮೂಲಭೂತ ಸೌಲಭ್ಯಗಳಿಲ್ಲದೆ ಜನತೆ ಪರದಾಡುವಂತಾಗುತ್ತಿದೆ.
ಅತಿ ಅವಶ್ಯಕವಾದ ಕುಡಿಯುವ ನೀರು ಮತ್ತು ಬಳಕೆ ನೀರಿನ ವ್ಯವಸ್ಥೆಯೂ ಸಹ ಅನೇಕ ಕ್ವಾರಂಟೈನ ಕೇಂದ್ರಗಳಲ್ಲಿ ಕಂಡುಬರುತ್ತಿಲ್ಲ ಎಂದು ಈ ಕೇಂದ್ರಗಳಲ್ಲಿ ಇದ್ದು ಬಂದಿರುವ ಬಹುತೇಕ ಸಾರ್ವಜನಿಕರ ದೂರಾಗಿದೆ.
ಹೆಚ್ಚಿ ಕ್ವಾರಂಟೈನ್ ಕೇಂದ್ರಗಳಲ್ಲಿ ಬೆಳಗಿನ ಉಪಹಾರವನ್ನು ನೀಡುವುದಿಲ್ಲ, ಎರಡು ಹೊತ್ತಿನ ಊಟಕ್ಕೆ ಅನ್ನ ಸಾಂಬಾರ ಮಾತ್ರ ನೀಡಲಾಗುತ್ತಿದೆ, ಕೆಲವರು ಅನ್ನ ಬದಲಿಗೆ ಚಪಾತಿ ಮತ್ತೇನಾದರೂ ನೀಡುವಂತೆ ಕೇಳಿದರೆ ಮಾತ್ರ ಒಂದೆರಡು ಚಪಾತಿಗಳನ್ನು ನೀಡುತ್ತಾರೆ ಇಲ್ಲದಿದ್ದರೆ ಅನ್ನ ಸಾಂಬಾರ ಮಾತ್ರ ನೀಡಲಾಗುತ್ತಿದೆ.
ಕೆಲ ಕ್ವಾರಂಟೈನ ಕೇಂದ್ರಗಳಲ್ಲಿ ಬಳಕೆ ನೀರಿಗಾಗಿ ದಿನಗಂಟಲೇ ಕಾಯುವುದು ಮತ್ತಿ ಒಂದೇ ಬಕೆಟ್ ನಿರಲ್ಲಿ ಹತ್ತಾರು ಬಟ್ಟೆಗಳನ್ನು ತೊಳೆಯಬೇಕಾಗಿದೆ ಎನ್ನುತ್ತಾರೆ ಈ ಕೇಂದ್ರಗಳಲ್ಲಿದ್ದು ಬಂದ ಸಾರ್ವಜನಿಕರು ಹೇಳುತ್ತಾರೆ. ಇದರಲ್ಲಿ ಜಿಲ್ಲಾಡಳಿತ ವೈಫಲ್ಯವನ್ನು ಕಂಡಿದೆ ಎನ್ನುವುದು ತೋರುತ್ತಿದೆ.
ಜಿಲ್ಲಾ ಆಸ್ಪತ್ರೆಯಲ್ಲಿ ೧೫೦ ಹಾಸಿಗೆಯುಳ್ಳ, ಪ್ರತಿ ತಾಲೂಕಾಸ್ಪತ್ರೆಗಳಲ್ಲಿ ತಲಾ ೧೦೦ ಹಾಸಿಗೆಯಳ್ಳ ಕೋವಿಡ್ ಚಿಕಿತ್ಸಾ ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತಿದೆ. ಈ ಕೇಂದ್ರಗಳಲ್ಲಿ ನಿರ್ಮಿತಿ ಕೇಂದ್ರದಿಂದ ೫೦ ಮತ್ತು ಆರೋಗ್ಯ ಇಲಾಖೆಯ ಇಂಜನೀಯರ್ ವಿಭಾಗದಿಂದ ತಲಾ ೫೦ ಆಕ್ಸಿಜನ್ ವ್ಯವಸ್ಥೆಗಳಿರುವ ಹಾಸಿಗೆಗಳ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.
ಇಗಾಗಲೆ ಸವಣೂರ, ಹಿರೇಕೆರೂರ, ಶಿಗ್ಗಾವ್ ತಾಲೂಕಾ ಆಸ್ಪತ್ರೆಗಳಲ್ಲಿ ೫೦ ಹಾಸಿಗೆ ವ್ಯವಸ್ಥೆಯನ್ನು ಮಾಡಲಾಗಿದೆ. ರಾಣೇಬೆನ್ನೂರದಲ್ಲಿ ಇಗಾಗಲೇ ೩೦ ವ್ಯವಸ್ಥೆಯನ್ನು ಮಾಡಲಾಗಿದೆ ಉಳಿದವುಗಳನ್ನು ಬೇಗನೆ ಸಿದ್ಧಗೊಳಿಸುವುದಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.
ಜಿಲ್ಲೆಯಲ್ಲಿ ೭೦ ಕೋವಿಡ್ ಕೇರ್ ಸೆಂಟರಗಳ ಸ್ಥಾಪನೆಗೆ ಜಾಗೆಗಳನ್ನು ಗುರುತಿಸಲಾಗಿದ್ದು ಈ ಕೇಂದ್ರಗಳಲ್ಲಿ ೫೦ ರಿಂದ ೧೫೦ ಜನರಿಗೆ ವ್ಯವಸ್ತೆ ಮಾಡಲಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss