Tuesday, June 28, 2022

Latest Posts

ಹಾವೇರಿ| ಗರ್ಭಿಣಿ-ಬಾಣಂತಿ ಸೇರಿದಂತೆ ನಾಲ್ವರಿಗೆ ಕೋವಿಡ್ ಸೋಂಕು ದೃಢ

ಹಾವೇರಿ:  ಜಿಲ್ಲೆಯಲ್ಲಿ ಗುರುವಾರ ಗರ್ಭಿಣಿ ಮತ್ತುಬಾಣಂತಿ ಸೇರಿದಂತೆ ನಾಲ್ಕು ಜನ ಮಹಿಳೆಯರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಎಂಟು ಜನರು ಕೋವಿಡ್ ಸೋಂಕಿನಿಂದ ಗುಣಮುಖರಾಗಿ ನಿಗದಿತ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಿಳಿಸಿದ್ದಾರೆ.
ಇಲ್ಲಿಯವರೆಗೆ 122 ಕೋವಿಡ್ ಪ್ರಕರಣ ದೃಢಗೊಂಡಿದ್ದು, ಇವರಲ್ಲಿ ೩೩ ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 87 ಪ್ರಕರಣಗಳು ಸಕ್ರಿಯವಾಗಿವೆ ಎಂದು ತಿಳಿಸಿದ್ದಾರೆ.
ಹಾವೇರಿ ತಾಲೂಕು ಕನವಳ್ಳಿ ಗ್ರಾಮದ ನಿವಾಸಿ ೨೫ ವರ್ಷದ ಐದು ತಿಂಗಳ ಗರ್ಭಿಣಿ (ಪಿ-೧೧೯), ಹಾನಗಲ್ ತಾಲೂಕು ಅಕ್ಕಿಲೂರಿನ ೩೦ ವರ್ಷದ ಬಾಣಂತಿ(ಪಿ-೧೨೦) ಹಾಗೂ ಯಳ್ಳೂರು ೪೫ ವರ್ಷದ ಮಹಿಳೆ(ಪಿ-೧೨೧), ಹಿರೇಕೆರೂರು ತಾಲೂಕಿನ ಮೇದೂರಿನ ೪೦ ವರ್ಷದ ಮಹಿಳೆ (ಪಿ-೧೨೨)ಗೆ ಇಂದು ಕೋವಿಡ್ ಸೋಂಕು ದೃಢಪಟ್ಟಿದೆ.
ಎಂಟು ಜನರ ಬಿಡುಗಡೆ
ಜೂನ್ ೨೦ ರಂದು ಕೋವಿಡ್ ಸೋಂಕು ದೃಢಪಟ್ಟು ನಿಗಧಿತ ಆಸ್ಪತ್ರೆಯಲ್ಲಿ ದಾಖಲಾಗಿ ಗುಣಮುಖರಾದ ಕಾರಣ ಗುರುವಾರ ಶಿಗ್ಗಾಂವಿ ಪಟ್ಟಣದ ೨೩ ವರ್ಷದ ಪುರುಷ (ಪಿ-೮೨೯೩), ೧೬ ವರ್ಷದ ಮಹಿಳೆ (ಪಿ-೮೨೯೪), ೪೫ ವರ್ಷದ ಮಹಿಳೆ (ಪಿ-೮೬೪೨), ೨೦ ವರ್ಷದ ಮಹಿಳೆ (ಪಿ-೮೬೪೩), ೧೫ ವರ್ಷದ ಮಹಿಳೆ (ಪಿ-೮೬೪೪), ೪ ವರ್ಷದ ಬಾಲಕ (ಪಿ-೮೬೪೫), ೬೦ ವರ್ಷದ ಪುರುಷ (ಪಿ-೮೬೪೬), ೪೦ ವರ್ಷದ ಪುರುಷ (ಪಿ-೮೬೪೭) ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss