Sunday, August 14, 2022

Latest Posts

ಹಾವೇರಿ| ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬಸವರಾಜ ಸೇರಿದಂತೆ ಮೂವರಿಗೆ ಸನ್ಮಾನ

ಹೊಸದಿಗಂತ ವರದಿ,ಹಾವೇರಿ:

ಪ್ರಸಕ್ತ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಜಾನಪದ ಮತ್ತು ತತ್ವಪದ ಹಾಡುಗಾರಿಕೆ ಕಲಾವಿದ ಬಸವರಾಜ ಶಿಗ್ಗಾವಿ, ಗೋಲ್ಡನ್ ಗ್ಲೋಬಲ್ ಅವಾರ್ಡ್ ಪ್ರಶಸ್ತಿ ಪುರಸ್ಕೃತ ನಾಮದೇವ ಕಾಗದಗಾರ ಹಾಗೂ ಕುಂಚಕಲಾವಿದ ಹರೀಶ ಹೆಡ್ಡನವರ ಅವರುಗಳನ್ನು ಇತ್ತೀಚೆಗೆ ಇಲ್ಲಿಯ ಹಂಚಿನಮನಿ ಆರ್ಟ ಗ್ಯಾಲರಿಯಲ್ಲಿ ಸನ್ಮಾನಿಸಲಾಯಿತು.

ಗ್ಯಾಲರಿ ವತಿಯಿಂದ ಗಣ್ಯರಾದ ಚಂದ್ರಶೇಖರ ಮಾಳಗಿ ಮತ್ತು ಕಲಾವಿದ ಕರಿಯಪ್ಪ ಹಂಚಿನಮನಿ ಪ್ರಶಸ್ತಿಪುರಕೃತರನ್ನು ಸನ್ಮಾನಿಸಿದರು.
ಚಂದ್ರಶೇಖರ ಮಾಳಗಿ ಮಾತನಾಡಿ, ಜಾನಪದ ನಮ್ಮ ಕಲೆಯ ಮೂಲ, ಅದರಲ್ಲಿ ಸಾಧನೆಗೈದ ಹೊಸ ತಲೆಮಾರಿನ ಬಸವರಾಜ ಶಿಗ್ಗಾವಿ ಸಾಧನೆ ಅಪರೂಪದ್ದು. ನಮ್ಮವರೆಯಾದ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿರುವ ನಾಮದೇವ ಕಾಗದಗಾರ ಹೊಸ ಕಲಾವಿದರಿಗೆ ಆಶಾಕಿರಣ ಎಂದು ಹೇಳಿದರು.

ವೇದಿಕೆಯಲ್ಲಿ ಈಶ್ವರ ಜೋಶಿ, ಜೈರಾಜ ಚಿಕ್ಕಪಾಟೀಲ, ಹೇಮಲತಾ, ಹರೀಶ ಮಾಳಪ್ಪನವರ, ರೇಖಾ ಹಂಚಿನಮನಿ, ಸಿ.ಎಚ್.ಬಾರ್ಕಿ, ಮಾಲತೇಶ ಅಂಗೂರ, ಸಿ.ಎ.ಕೂಡಲಮಠ, ವಿರೂಪಾಕ್ಷ ಹಾವನೂರ ಮುಂತಾದವರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss