ಹಾವೇರಿ: ಮಹಾಮಾರಿ ಕೊರೋನಾ ಹಾವೇರಿ ಜಿಲ್ಲೆಯಲ್ಲಿ ವ್ಯಾಪಕವಾಗಿ ವ್ಯಾಪಿಸುತ್ತಿದ್ದು ಇದೀಗ ಪತ್ರಿಕೆ ಒಂದರ ಜಾಹೀರಾತು ಪ್ರತಿನಿಧಿಗೂ ಸಹ ಕೊರೋನಾ ಪಾಸಿಟಿವ್ ವರದಿ ಶನಿವಾರ ಸಂಜೆ ದೃಢ ಪಟ್ಟಿದೆ ಎನ್ನಲಾಗಿದ್ದು, ಇದರಿಂದಾಗಿ ಜಿಲ್ಲೆಯ ಪತ್ರಿಕಾ ವಲಯ ಹಾಗೂ ಜಿಲ್ಲೆಯ ಕೆಲವು ಹಿರಿಯ ಅಧಿಕಾರಿಗಳು ಆತಂಕದಲ್ಲಿ ಇರುವಂತಾಗಿದೆ.
ಕಳೆದ ನಾಲ್ಕಾರು ದಿನಗಳಿಂದ ಕೆಮ್ಮು ಮತ್ತು ಉಸಿರಾಟದ ತೊಂದರೆ ಇಂದ ಬಳಲುತ್ತಿದ್ದ ಜಾಹೀರಾತು ಪ್ರತಿನಿಧಿಯನ್ನು ಶನಿವಾರ ಸಂಜೆ ಇಲ್ಲಿನ ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಿದ ಸಂದರ್ಭದಲ್ಲಿ ಅವರಿಗೆ ಕೊರೋನಾ ದೃಢಪಟ್ಟಿದೆ ಎನ್ನಲಾಗಿದೆ.
ಆತಂಕಕಾರಿ ಸಂಗತಿ ಎಂದರೆ ಜುಲೈ ೧೫ ರಂದು ಜಿಲ್ಲಾ ಮಟ್ಟದ ಓರ್ವ ಉನ್ನತಮಟ್ಟದ ಅಧಿಕಾರಿ ಹಾಗೂ ಇಲಾಖೆಯೊಂದರ ಉಪನಿರ್ದೇಶಕರು ಸೋಂಕಿತನೊಂದಿಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು ಎನ್ನಲಾಗುತ್ತಿದೆ.
ಪ್ರಥಮ ಮತ್ತು ದ್ವಿತೀಯ ಹಂತದ ಸಂಪರ್ಕಹೊಂದಿದವರ ಹೊಂದಿದವರ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.