ಹಾವೇರಿ : ಜಿಲ್ಲೆಯಲ್ಲಿ ಪೊಲೀಸ್, ಅರಣ್ಯ ಇಲಾಖೆ, ರೈಲ್ವೆ ಇಲಾಖೆ, ಶಿಕ್ಷಣ ಇಲಾಖೆ ಸಿಬ್ಬಂಧೀ ಸೇರಿ ಒಟ್ಟು ೧೦೭ ಜನರಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದರೆ, ೧೦೭ ಜನರು ಗುಣಮುಖರಾಗಿ ಬಿಡುಗಡೆ ಆಗಿದ್ದರೆ ಮೂವರು ಮರಣ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ ತಿಳಿಸಿದ್ದಾರೆ.
ಜಿಲ್ಲೆಯ ಬ್ಯಾಡಗಿ ತಾಲೂಕಿನಲ್ಲಿ ೫, ಹಾನಗಲ್ ೧೨, ಹಾವೇರಿ ೩೦, ಹಿರೇಕೆರೂರ ೨೦, ರಾಣೇಬೆನ್ನೂರ ೨೬, ಸವಣೂರ ೧, ಶಿಗ್ಗಾಂವ್ ೧೩ ಸೋಂಕಿನ ಪ್ರಕರಣಗಳು ಸೇರಿ ಒಟ್ಟು ೧೦೭ ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಈವರಗೆ ಜಿಲ್ಲೆಯಲ್ಲಿ ೪೨೫೯ ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು ಇವರಲ್ಲಿ ೨೮೭೮ ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಇಂದಿನ ಮೂವರ ಮರಣ ಸೇರಿ ಒಟ್ಟು ೧೦೪ ಜನರು ಮರಣಹೊಂದಿದಂತಾಗಿದೆ.
ಹೋಂ ಐಸೋಲೇಷನ್ದಲ್ಲಿನ ೮೯೧ ಹಾಗೂ ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರರೆಗಳಲ್ಲಿನ ೩೮೬ ಜನರು ಸೇರಿ ಒಟ್ಟು ೧೨೭೭ ಜನರಲ್ಲಿ ಕೊರೋನಾ ಸೋಂಕು ಸಕ್ರೀಯವಾಗಿದೆ ಎಂದು ಅವರು ತಿಳಿಸಿದ್ದಾರೆ.