Thursday, August 18, 2022

Latest Posts

ಹಾವೇರಿ ಜಿಲ್ಲೆಯಲ್ಲಿ 109 ಜನರಿಗೆ ಕೋವಿಡ್ ದೃಢ, 83 ಜನರು ಗುಣಮುಖ, ಓರ್ವ ಸಾವು

ಹಾವೇರಿ:  ತಾಲೂಕು ಪಂಚಾಯತಿ ಹಾಗೂ ಆರೋಗ್ಯ ಇಲಾಖೆ ನೌಕರರು ಒಳಗೊಂಡಂತೆ ಜಿಲ್ಲೆಯಲ್ಲಿ ಶನಿವಾರ ೧೦೯ ಜನರಿಗೆ ಕೋವಿಡ್-೧೯ ದೃಢಪಟ್ಟಿದೆ ಹಾಗೂ ೮೩ ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ೭೬೯೮ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿವೆ. ಇಂದಿನವರೆಗೆ ೫೭೩೯ ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಹೊಂದಿದ್ದಾರೆ ಹಾಗೂ ಇಂದಿನ ಒಂದು ಮರಣ ಪ್ರಕರಣ ಸೇರಿದಂತೆ ಈವರೆಗೆ ೧೪೩ ಜನರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ೧೮೧೬ ಸಕ್ರಿಯ ಪ್ರಕರಣಗಳಿವೆ(೧೪೩೦ ಸೋಂಕಿತರು ಹೋಂ ಐಸೋಲೇಷನ್‌ನಲ್ಲಿ ಹಾಗೂ ೩೮೬ ಸೋಂಕಿತರು ಕೋವಿಡ್ ಕೇರ್ ಆಸ್ಪತ್ರೆ, ಕೋವಿಡ್ ಕೇರ್‌ಹೆಲ್ತ್ ಸೆಂಟರ್, ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ).
ಜಿಲ್ಲೆಯ ಬ್ಯಾಡಗಿ ತಾಲೂಕಿನಲ್ಲಿ ೨೭, ಹಾನಗಲ್ ೧೬, ಹಾವೇರಿ ೧೯, ಹಿರೇಕೆರೂರು ೧೬, ರಾಣೇಬೆನ್ನೂರು ೧೯, ಸವಣೂರು ೧೦, ಶಿಗ್ಗಾಂವ ೧ ಹಾಗೂ ಇತರೆ ಓರ್ವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಜಿಲ್ಲೆಯ ಬ್ಯಾಡಗಿ ತಾಲೂಕಿನಲ್ಲಿ ೩೦, ಹಾವೇರಿ ೧೬, ರಾಣೇಬೆನ್ನೂರು ೧೩, ಹಿರೇಕೆರೂರು ೧೫, ಶಿಗ್ಗಾಂವ ೩, ಸವಣೂರು ೫ ಹಾಗೂ ಇತರೆ ಓರ್ವರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.
ಹಾವೇರಿ ತಾಲೂಕು ಗುತ್ತಲದ ೬೨ ವರ್ಷದ ಮಹಿಳೆ ಮೃತಪಟ್ಟಿದ್ದು, ಕೋವಿಡ್ ನಿಯಮಾನುಸಾರ ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!