Sunday, August 14, 2022

Latest Posts

ಹಾವೇರಿ ಜಿಲ್ಲೆಯಲ್ಲಿ 111 ಜನರಿಗೆ ಕೋವಿಡ್ ಸೋಂಕು ದೃಢ, 200 ಜನರು ಗುಣಮುಖ

ಹಾವೇರಿ: ಪೊಲೀಸ್, ಆರೋಗ್ಯ ಇಲಾಖೆ ಹಾಗೂ ತಾಲೂಕು ಪಂಚಾಯತ್ ನೌಕರರು ಒಳಗೊಂಡಂತೆ ಜಿಲ್ಲೆಯಲ್ಲಿ ಸೋಮವಾರ ೧೧೧ ಜನರಿಗೆ ಕೋವಿಡ್-೧೯ ಪಾಸಿಟಿವ್ ದೃಢಪಟ್ಟಿದೆ ಹಾಗೂ ೨೦೦ ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ೭೮೫೭ ಕೋವಿಡ್-೧೯ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಇಂದಿನವರೆಗೆ ೬೨೨೯ ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಹೊಂದಿದ್ದಾರೆ ಹಾಗೂ ಇಂದಿನ ಮೂರು ಮರಣ ಪ್ರಕರಣ ಸೇರಿದಂತೆ ಈವರೆಗೆ ೧೪೮ ಜನರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ೧೪೮೦ ಸಕ್ರಿಯ ಪ್ರಕರಣಗಳಿವೆ(೧೧೦೪ ಸೋಂಕಿತರು ಹೋಂ ಐಸೋಲೇಷನ್‌ನಲ್ಲಿ ಹಾಗೂ ೩೭೬ ಸೋಂಕಿತರು ಕೋವಿಡ್ ಕೇರ್ ಆಸ್ಪತ್ರೆ, ಕೋವಿಡ್ ಕೇರ್‌ಹೆಲ್ತ್ ಸೆಂಟರ್, ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ).
ಜಿಲ್ಲೆಯ ಹಾನಗಲ್ ತಾಲೂಕಿನಲ್ಲಿ ೧೨, ಹಾವೇರಿ ೨೮, ಹಿರೇಕೆರೂರು ೨೮, ರಾಣೇಬೆನ್ನೂರು ೫, ಸವಣೂರು ೪, ಶಿಗ್ಗಾಂವ ೩೩ ಹಾಗೂ ಇತರೆ ಓರ್ವರಿಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯ ಬ್ಯಾಡಗಿ ತಾಲೂಕಿನ ೨೭, ಹಾನಗಲ್ ೩೨, ಹಾವೇರಿ ೯೪, ಹಿರೇಕೆರೂರು ೮, ರಾಣೇಬೆನ್ನೂರು ೨, ಸವಣೂರು ೨ ಹಾಗೂ ಶಿಗ್ಗಾಂವ ತಾಲೂಕಿನಲ್ಲಿ ೩೫ ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಜಿಲ್ಲೆಯ ಹಾನಗಲ್ ಕುಮಾರೇಶ್ವರನಗರದ ೫೮ ವರ್ಷದ ಪುರುಷ, ಬ್ಯಾಡಗಿ ತಾಲೂಕು ಛತ್ರದ ೪೨ ವರ್ಷದ ಪುರುಷ ಹಾಗೂ ತಿಮಕಾಪುರ ಗ್ರಾಮದ ೬೦ ವರ್ಷದ ಪುರುಷ ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss