Sunday, August 14, 2022

Latest Posts

ಹಾವೇರಿ ಜಿಲ್ಲೆಯಲ್ಲಿ 119 ಜನರಿಗೆ ಕೋವಿಡ್ ಸೋಂಕು ದೃಢ, 82 ಜನರು ಗುಣಮುಖ

ಹಾವೇರಿ: ಪತ್ರಕರ್ತರು, ವೈದ್ಯ, ಶೂಶ್ರುಷಕರು, ಲ್ಯಾಬ್‌ಟೆಕ್ನಿಷಿಯನ್, ಆಶಾ ಕಾರ್ಯಕರ್ತೆ, ಕೆ.ಎಸ್.ಆರ್.ಟಿ.ಸಿ.ವಾಹನ ಚಾಲಕ, ಪೊಲೀಸ್, ರೈಲ್ವೆ ಉದ್ಯೋಗಿ ಸೇರಿದಂತೆ ಜಿಲ್ಲೆಯಲ್ಲಿ ಮಂಗಳವಾರ ೧೧೯ ಜನರಿಗೆ ಕೋವಿಡ್-೧೯ ಪಾಸಿಟಿವ್ ದೃಢಪಟ್ಟಿದೆ ಹಾಗೂ ೮೨ ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ ಐವರು ಮರಣಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ೩೬೬೮ ಕೋವಿಡ್-೧೯ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಇಂದಿನವರೆಗೆ ೨೨೫೯ ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಹೊಂದಿದ್ದಾರೆ ಹಾಗೂ ಇಂದಿನ ಐದು ಮರಣ ಪ್ರಕರಣ ಸೇರಿ ಒಟ್ಟಾರೆ ೮೫ ಜನರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ೧,೩೨೪ ಸಕ್ರಿಯ ಪ್ರಕರಣಗಳಿವೆ ಇವರಲ್ಲಿ ೮೪೧ ಸೋಂಕಿತರು ಹೋಂ ಐಸೋಲೇಷನ್‌ನಲ್ಲಿ ಹಾಗೂ ೪೮೩ ಸೋಂಕಿತರು ಕೋವಿಡ್ ಕೇರ್ ಆಸ್ಪತ್ರೆ, ಕೋವಿಡ್ ಕೇರ್‌ಹೆಲ್ತ್ ಸೆಂಟರ್, ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಜಿಲ್ಲೆಯ ಸವಣೂರು, ಶಿಗ್ಗಾಂವಿ ಹಾಗೂ ಬ್ಯಾಡಗಿ ತಾಲೂಕುಗಳಲ್ಲಿ ತಲಾ ೮, ಹಿರೇಕೆರೂರು ೧೩, ಹಾನಗಲ್ ೧೬, ಹಾವೇರಿ ೧೯, ರಾಣೇಬೆನ್ನೂರು ೪೬ ಹಾಗೂ ಇತರೆ ಓರ್ವರಿಗೆ ಸೋಂಕು ದೃಢಪಟ್ಟಿದೆ.
ರಾಣೇಬೆನ್ನೂರು ತಾಲೂಕು ಗುಡ್ಡದಆನ್ವೇರಿಯ ೬೪ ವರ್ಷದ ಪುರುಷ, ಹಾನಗಲ್ ನಗರದ ೮೪ ವರ್ಷದ ಪುರುಷ, ರಟ್ಟೀಹಳ್ಳಿಯ ೫೯ ವರ್ಷದ ಮಹಿಳೆ, ಹಾವೇರಿ ತಾಲೂಕು ಕನವಳ್ಳಿ ಗ್ರಾಮದ ೬೦ ವರ್ಷದ ಮಹಿಳೆ ಹಾಗೂ ರಾಣೇಬೆನ್ನೂರು ನಗರದ ೫೦ ವರ್ಷದ ಪುರುಷ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss