ಹಾವೇರಿ: ಜಿಲ್ಲೆಯಲ್ಲಿ ವೈದ್ಯ, ಲ್ಯಾಬ್ಟೆಕ್ನಿಷಿಯನ್, ಪ್ರಿನ್ಸಿಪಾಲ್, ಕೆ.ಇ.ಬಿ., ನ್ಯಾಯಾಂಗ, ಶಿಕ್ಷಣ, ಆರೋಗ್ಯ, ರೈಲ್ವೆ ಇಲಾಖೆ ಸಿಬ್ಬಂದಿಗಳು ಸೇರಿ ೧೩೭ ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ೨೯ ಜನರು ಗುಣಮುಖರಾಗಿ ಬಿಡುಗಡೆ ಆಗಿದ್ದಾರೆ ಹಾಗೂ ಮೂರು ಮರಣ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ೨೭೭೨ ಕೊರೋನಾ ಸೋಂಕು ದೃಢ ಪ್ರಕರಣಗಳಿದ್ದು. ಇಂದಿನವರೆಗೆ ೧೭೪೪ ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಹೊಂದಿದ್ದಾರೆ ಹಾಗೂ ಇಂದಿನ ಮೂರು ಮರಣ ಪ್ರಕರಣ ಸೇರಿ ಒಟ್ಟಾರೆ ೬೨ ಜನರು ಕೋವಿಡ್ನಿಂದ ಮೃತಪಟ್ಟಿದ್ದಾರೆ. ೯೬೬ ಸಕ್ರಿಯ ಪ್ರಕರಣಗಳಿವೆ(೫೩೧ ಸೋಂಕಿತರು ಹೋಂ ಐಸೋಲೇಷನ್ನಲ್ಲಿ ಹಾಗೂ ೪೩೫ ಸೋಂಕಿತರು ಕೋವಿಡ್ ಕೇರ್ ಆಸ್ಪತ್ರೆ, ಕೋವಿಡ್ ಕೇರ್ಹೆಲ್ತ್ ಸೆಂಟರ್, ಕೋವಿಡ್ ಕೇರ್ ಸೆಂಟರ್ಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ).
ಜಿಲ್ಲೆಯ ಹಾವೇರಿ ತಯಾಲೂಕಿನಲ್ಲಿ ೪೩, ರಾಣೇಬೆನ್ನೂರು ೨೯, ಹಿರೇಕೆರೂರು ೧೦, ಹಾನಗಲ್ ೪, ಬ್ಯಾಡಗಿ ೧೩, ಸವಣೂರ ೧೫, ಶಿಗ್ಗಾಂವ ೨೨ ಇತರೆ ಒಬ್ಬರು ಸೇರಿ ಒಟ್ಟು ೧೩೭ ಜನರಲ್ಲಿ ಸೋಂಕು ದೃಢಪಟ್ಟಿದೆ.
ಶಿಗ್ಗಾಂವಿ ಹಾಗೂ ರಾಣೇಬೆನ್ನೂರು ತಲಾ ೨, ಹಾವೇರಿ ೬, ಬ್ಯಾಡಗಿ ಹಾಗೂ ಹಾನಗಲ್ ತಲಾ ೧, ಹಿರೇಕೆರೂರ ೫ ಹಾಗೂ ಸವಣೂರ ತಾಲೂಕಿನ ೧೨ ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.
ಹಾವೇರಿ ನಗರದ ನಾಗೇಂದ್ರನಮಟ್ಟಿಯ ೪೭ ವರ್ಷದ ಪುರುಷ ಹಾಗೂ ಅಶ್ವಿನಿ ನಗರದ ೬೦ ವರ್ಷದ ಪುರುಷ ಮತ್ತು ಜಿಲ್ಲೆಯ ಬ್ಯಾಡಗಿಯ ಮೆಟ್ಟದಮಲ್ಲೇಶ್ವರ ನಗರದ ೪೫ ವರ್ಷದ ಪುರುಷ ಮೃತಪಟ್ಟಿದ್ದಾರೆ.