Tuesday, August 16, 2022

Latest Posts

ಹಾವೇರಿ ಜಿಲ್ಲೆಯಲ್ಲಿ 150 ಜನರಿಗೆ ಕೋವಿಡ್ ಸೋಂಕು ದೃಢ. 221 ಜನರು ಗುಣಮುಖ

ಹಾವೇರಿ: ಏಳು ಜನ ಶಿಕ್ಷಣ ಹಾಗೂ ೮ ಜನ ಪೊಲೀಸ್ ಇಲಾಖೆ, ಓರ್ವ ಶೂಶ್ರುಷಕಿ, ಓರ್ವ ಆರೋಗ್ಯ ಇಲಾಖೆಯ ಉದ್ಯೋಗಿಗಳು ಸೇರಿದಂತೆ ಜಿಲ್ಲೆಯಲ್ಲಿ ಸೋಮವಾರ ೧೫೦ ಜನರಿಗೆ ಕೊರೋನಾ ದೃಢಪಟ್ಟಿದೆ ಹಾಗೂ ೨೨೧ ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರ‍್ಲಲದೆ ಆರು ಜನರು ಮರಣಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ೩,೫೪೯ ಕೊರೋನಾ ಪ್ರಕರಣಗಳು ದೃಢಪಟ್ಟಿವೆ. ಇಂದಿನವರೆಗೆ ೨,೧೭೭ ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಹೊಂದಿದ್ದಾರೆ ಹಾಗೂ ಇಂದಿನ ಆರು ಮರಣ ಪ್ರಕರಣ ಸೇರಿ ಒಟ್ಟಾರೆ ೮೦ ಜನರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ೧,೨೯೨ ಸಕ್ರಿಯ ಪ್ರಕರಣಗಳಿವೆ(೭೭೨ ಸೋಂಕಿತರು ಹೋಂ ಐಸೋಲೇಷನ್‌ನಲ್ಲಿ ಹಾಗೂ ೫೨೦ ಸೋಂಕಿತರು ಕೋವಿಡ್ ಕೇರ್ ಆಸ್ಪತ್ರೆ, ಕೋವಿಡ್ ಕೇರ್‌ಹೆಲ್ತ್ ಸೆಂಟರ್, ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ).
ಜಿಲ್ಲೆಯ ಸವಣೂರ ತಾಲೂಕಿನಲ್ಲಿ ೩, ಶಿಗ್ಗಾಂವ ೮, ಬ್ಯಾಡಗಿ ೯, ಹಿರೇಕೆರೂರು ೯, ಹಾನಗಲ್ ೧೩, ರಾಣೇಬೆನ್ನೂರು ೨೯ ಹಾಗೂ ಹಾವೇರಿ ತಾಲೂಕಿನಲ್ಲಿ ೭೯ ಸೋಂಕು ದೃಢಪಟ್ಟಿದೆ.
ಹಾವೇರಿ ತಾಲೂಕಿನ ಕಳ್ಳಿಹಾಳ ಗ್ರಾಮದ ೫೦ ವರ್ಷದ ಪುರುಷ, ಗಣಜೂರ ಗ್ರಾಮದ ೬೪ ವರ್ಷದ ಪುರುಷ, ಹಾನಗಲ್ ತಾಲೂಕಿನ ನರೇಗಲ್ ಗ್ರಾಮದ ೬೦ ವರ್ಷದ ಮಹಿಳೆ, ಹಾವೇರಿಯ ದ್ಯಾಮವ್ವ ಗುಡಿ ಹತ್ತಿರದ ೮೫ ವರ್ಷದ ಪುರುಷ, ಶಿವಾಜಿನಗರದ ೪೪ ವರ್ಷದ ಪುರುಷ ಹಾಗೂ ಶಿವಲಿಂಗನಗರದ ೫೪ ವರ್ಷದ ಪುರುಷ ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss