Friday, July 1, 2022

Latest Posts

ಹಾವೇರಿ ಜಿಲ್ಲೆಯಲ್ಲಿ 18503 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರ್, 1097 ವಿದ್ಯಾರ್ಥಿಗಳು ಗೈರು

ಹಾವೇರಿ: ಜಿಲ್ಲೆಯಲ್ಲಿ 18503 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ, 1097 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ವಿದ್ಯಾರ್ಥಿ ಡಿಬಾರ್ ಆಗಿಲ್ಲ. ಜಿಲ್ಲೆಯ ಅನೇಕ ಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಕ್ಕೆ ತೆರಳುವ ಸಂದರ್ಭದಲ್ಲಿ ಸಾಮಾಜಿಕ ಅಂತರವನ್ನು ಮರೆತು ವಿದ್ಯಾರ್ಥಿಗಳು ಗುಂಪು ಗುಂಪಾಗಿ ನಿಂತಿರುವುದು ಕಂಡು ಬಂದರೆ ಇನ್ನು ಕೆಲ ಕೇಂದ್ರಗಳಲ್ಲಿ ಬಹಳ ವ್ಯವಸ್ಥಿತವಾಗಿ ವಿದ್ಯಾರ್ಥಿಗಳು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಪರೀಕ್ಷಾ ಕೇಂದ್ರದ ಒಳಗಡೆ ತೆರಳಿದ್ದಾರೆ.
ಜಿಲ್ಲೆಯ ೧೯೬೬೦ ವಿದ್ಯಾರ್ಥಿಗಳಲ್ಲಿ ೧೮೫೦೩ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ೧೦೯೭ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ವಿದ್ಯಾರ್ಥಿ ಡಿಬಾರ್ ಆಗಿಲ್ಲ.
ಜಿಲ್ಲೆಯ ಅನೇಕ ಪರೀಕ್ಷಾ ಕೇಂದ್ರಗಳಲ್ಲಿ ಸಾರ್ವಜನಿಕರು ಮತ್ತು ಸಂಘ ಸಂಸ್ಥೆಯ ಪದಾಧಿಕಾರಿಗಳು ಕೋವಿಡ್ ಭಯವಿಲ್ಲದೆ ಮತ್ತು ಇತರ ಯಾವುದೇ ಅಂಜಿಕೆ ಇಲ್ಲದೆ ಪರೀಕ್ಷೆ ಬರೆಯುವದಕ್ಕೆ ಪ್ರೋತ್ಸಾಹಿಸುವ ದೃಷ್ಠಿಯಿಂದ ವಿದ್ಯಾರ್ಥಿಗಳಿಗೆ ಹೂಗಳನ್ನು ನೀಡಿದ್ದು ಕಂಡುಬಂದಿತು.
ಕೆಲ ಪರೀಕ್ಷಾ ಕೇಂದ್ರಗಳನ್ನು ತಳಿರು ತೋರಣ ಮತ್ತು ಬಲೂಗಳಿಂದ ಅಲಂಕಾರ ಮಾಡಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವದಕ್ಕೆ ಅವರ ಮನಸ್ಸಿಗೆ ಮುದ ನೀಡುವಂತೆ ಮಾಡಲಾಗಿತ್ತು.
ಜಿಲ್ಲೆಯ ಬ್ಯಾಡಗಿ ತಾಲೂಕಿನ ಒಟ್ಟು ೨೦೧೬ ವಿದ್ಯಾರ್ಥಿಗಳಲ್ಲಿ ೧೯೦೨ ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ ೧೧೯ ವಿದ್ಯಾರ್ಥಿಗಳು ಗೈರಾಗಿದ್ದಾರೆ. ಹಾನಗಲ್ ತಾಲೂಕಿನ ಒಟ್ಟು ೩೨೪೩ ವಿದ್ಯಾರ್ಥಿಗಳಲ್ಲಿ ೩೧೦೮ ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ ೧೩೫ ವಿದ್ಯಾರ್ಥಿಗಳು ಗೈರಾಗಿದ್ದಾರೆ. ಹಾವೇರಿ ತಾಲೂಕಿನ ಒಟ್ಟು ೨೧೭೧ ವಿದ್ಯಾರ್ಥಿಗಳಲ್ಲಿ ೧೮೮೬ ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ ೨೮೫ ವಿದ್ಯಾರ್ಥಿಗಳು ಗೈರಾಗಿದ್ದಾರೆ. ಹಿರೇಕೆರೂರ ತಾಲೂಕಿನ ಒಟ್ಟು ೩೩೧೬ ವಿದ್ಯಾರ್ಥಿಗಳಲ್ಲಿ ೩೧೪೩ ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ ೧೭೩ ವಿದ್ಯಾರ್ಥಿಗಳು ಗೈರಾಗಿದ್ದಾರೆ. ತಾಣೇಬೆನ್ನೂರ ತಾಲೂಕಿನ ಒಟ್ಟು ೪೩೩೩ ವಿದ್ಯಾರ್ಥಿಗಳಲ್ಲಿ ೪೧೪೯ ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ ೧೮೪ ವಿದ್ಯಾರ್ಥಿಗಳು ಗೈರಾಗಿದ್ದಾರೆ. ಸವಣೂರ ತಾಲೂಕಿನ ಒಟ್ಟು ೧೮೦೨ ವಿದ್ಯಾರ್ಥಿಗಳಲ್ಲಿ ೧೭೩೭ ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ ೬೫ ವಿದ್ಯಾರ್ಥಿಗಳು ಗೈರಾಗಿದ್ದಾರೆ ಹಾಗೂ ಶಿಗ್ಗಾಂವ ತಾಲೂಕಿನ ಒಟ್ಟು ೨೭೧೯ ವಿದ್ಯಾರ್ಥಿಗಳಲ್ಲಿ ೨೫೭೮ ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ ೧೪೧ ವಿದ್ಯಾರ್ಥಿಗಳು ಗೈರಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss