ಹಾವೇರಿ: ಜಿಲ್ಲೆಯಲ್ಲಿ ಇತ್ತೀಚೆಗೆ ಕೊರೋನಾ ವಿರುದ್ಧ ಹೋರಾಡುವವರಿಗೆನೆ ಹೆಚ್ಚು ಹೆಚ್ಚು ಕೊರೋನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಪ್ರಮುಖವಾಗಿ ವೈದ್ಯರು, ದಾದಿಯರು, ಆಶಾಕಾರ್ಯಕರ್ತರು, ಆಸ್ಪತ್ರೆ ಸಿಬ್ಬಂಧಿಗಳಲ್ಲಿ ಇಷ್ಟು ಕಾಣಿಸಿಕೊಳ್ಳುತ್ತಿದ್ದ ಕೊರೋನಾ ಈಗ ಪೊಲೀಸರನ್ನು ಆವರಿಸಿಕೊಳ್ಳುತ್ತಿದೆ.
ಐವರು ಪೊಲೀಸ್, ಓರ್ವ ಹೋಂಗಾರ್ಡ್, ಓರ್ವ ಕೆ.ಎಸ್.ಆರ್.ಪಿ. ಪೊಲೀಸ್ ಹಾಗೂ ಓರ್ವ ಆಸ್ಪತ್ರೆ ಡಿ ಗ್ರೂಪ್ ನೌಕರ ಸೇರಿ ಜಿಲ್ಲೆಯಲ್ಲಿ ಸೋಮವಾರ ೨೭ ಜನರಿಗೆ ಕೋವಿಡ್-೧೯ ಪಾಸಿಟಿವ್ ದೃಢಪಟ್ಟಿದೆ. ೨೨ ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ೭೮೭ ಕೋವಿಡ್-೧೯ ಪಾಸಿಟಿವ್ ಪ್ರಕರಣಗಳು ದೃಢಗೊಂಡಿವೆ. ಇಂದಿನವರೆಗೆ ೪೮೦ ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಹೊಂದಿದ್ದಾರೆ ಹಾಗೂ ೨೪ ಜನರು ಮೃತಪಟ್ಟಿದ್ದಾರೆ. ೨೮೩ ಪ್ರಕರಣಗಳು ಸಕ್ರಿಯವಾಗಿವೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಿಳಿಸಿದ್ದಾರೆ.
ಸೋಮವಾರ ರಾಣೇಬೆನ್ನೂರು ತಾಲೂಕಿನಲ್ಲಿ ೭, ಹಿರೇಕೆರೂರು ೬, ಸವಣೂರು ಹಾಗೂ ಶಿಗ್ಗಾಂವ ತಾಲೂಕಿನಲ್ಲಿ ತಲಾ ೫, ಹಾವೇರಿ ತಾಲೂಕಿನಲ್ಲಿ ೩ ಹಾಗೂ ಹಾನಗಲ್ ತಾಲೂಕಿನಲ್ಲಿ ಒಂದು ಪ್ರಕರಣ ಪತ್ತೆಯಾಗಿವೆ.
ಸವಣೂರ ತಾಲೂಕು ಆಸ್ಪತ್ರೆ ಡಿ ಗ್ರೂಪ್ ನೌಕರ ೨೧ ವರ್ಷದ ಯುವಕ, ಶಿಗ್ಗಾಂವ ತಾಲೂಕಿನ ಗಂಗೀಭಾವಿ ೨೩ ವರ್ಷದ ಕೆ.ಎಸ್.ಆರ್.ಪಿ.ಪೊಲೀಸ್, ಹಿರೇಕೆರೂರಿನ ೩೨ ವರ್ಷ, ೫೧ ವರ್ಷ, ೫೦ ವರ್ಷ, ೩೭ ವರ್ಷ ಹಾಗೂ ೪೨ ವರ್ಷದ ಪೊಲೀಸ್ ಕಾನಸ್ಟೇಬಲ್ಗಳು, ೪೦ ವರ್ಷದ ಹೋಮ್ ಗಾರ್ಡ್ ಓರ್ವರಿಗೆ ಸೋಂಕು ದೃಢಪಟ್ಟಿದೆ.
ಗುಣಮುಖರಾದವರು
ಶಿಗ್ಗಾಂವ ತಾಲೂಕಿನ ೫, ರಾಣೇಬೆನ್ನೂರ ತಾಲೂಕಿನ ೬, ಹಾವೇರಿ ತಾಲೂಕಿನ ೮, ಬ್ಯಾಡಗಿ ತಾಲೂಕಿನ ಓರ್ವರು ಹಾಗೂ ಹಾನಗಲ್ ತಾಲೂಕಿನ ಇಬ್ಬರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.