Friday, August 12, 2022

Latest Posts

ಹಾವೇರಿ ಜಿಲ್ಲೆಯಲ್ಲಿ 6 ಪೊಲೀಸರು, ಓರ್ವ ಕೆ.ಎಸ್.ಆರ್.ಟಿ.ಸಿ ಡ್ರೈವರ್ ಸೇರಿ 56 ಮಂದಿಯಲ್ಲಿ ಕೊರೋನಾ ಸೋಂಕು ದೃಢ

ಹಾವೇರಿ: ಜಿಲ್ಲೆಯಲ್ಲಿ ಶುಕ್ರವಾರ ಆರು ಜನರ ಪೊಲೀಸರು, ಓರ್ವ ಕೆ.ಎಸ್.ಆರ್.ಟಿ.ಸಿ ವಾಹನ ಚಾಲಕ ಸೇರಿ 56 ಮಂದಿಯಲ್ಲಿ ಕೊರೋನಾ ಸೋಂಕಿತರ ಕಾಣಿಸಿಕೊಳ್ಳುವ ಮೂಲಕ ಇವರೆಗೆ ಜಿಲ್ಲೆಯಲ್ಲಿ ೯೯೧ಕ್ಕೆ ಏರಿದಂತಾಗಿದೆ ಸೋಂಕಿತರ ಸಂಖ್ಯೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣನವರ ತಿಳಿಸಿದ್ದಾರೆ.
ಇಂದು ೩೫ ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಹೊಂದುವ ಮೂಲಕ ಒಟ್ಟು ೫೫೭ ಜನರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದಂತಾಗಿದೆ. ಇನ್ನು ೪೦೭ ಜನರಲ್ಲಿ ಸೋಂಕು ಸಕ್ರೀಯವಾಗಿದೆ. ೭ ಜನರಿಗೆ ಐ.ಸಿ.ಯುದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಶಿಗ್ಗಾಂವ ತಾಲೂಕಿನಲ್ಲಿ ೫, ಸವಣೂರ ತಾಲೂಕಿನಲ್ಲಿ ೭, ರಾಣೇಬೆನ್ನೂರ ತಾಲೂಕಿನಲ್ಲಿ ೭, ಹಾವೇರಿ ತಾಲೂಕಿನಲ್ಲಿ ೨೩ ಹಾಗೂ ಹಿರೇಕೆರೂರ ತಾಲೂಕಿನಲ್ಲಿ ೧೪ ಪ್ರಕರಣಗಳು ಸೇರಿ ೫೬ ಜನರಲ್ಲಿ ಕೊರೋನಾ ಸೋಂಕು ದೃಢವಾಗಿದೆ. ಬ್ಯಾಡಗಿ ಮತ್ತು ಹಾನಗಲ್ ತಾಲೂಕುಗಳಲ್ಲಿ ಕೊರೋನಾ ಪ್ರಕರಣಗಳು ಕಂಡುಬಂದಿಲ್ಲ ಮತ್ತು ಜಿಲ್ಲೆಯಲ್ಲಿ ಇಂದು ಕೊರೋನಾದಿಂದ ಯಾರೂ ಮೃತಪಟ್ಟಿಲ್ಲ.
ಹಾವೇರಿ ಮತ್ತು ಶಿಗ್ಗಾಂವ ತಾಲೂಕುಗಳಲ್ಲಿ ತಲಾ ಮೂವರು ಪೊಲೀಸರಿಗೆ, ಹಾವೇರಿಯ ಓರ್ವ ಕೆ.ಎಸ್.ಆರ್.ಟಿ.ಸಿ ವಾಹನ ಚಾಲಕನಿಗೆ ಕೊರೋನಾ ದೃಢವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss