spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಹಾವೇರಿ ಜಿಲ್ಲೆಯಲ್ಲಿ 9 ಜನರಲ್ಲಿ ಕೋವಿಡ್ ದೃಢ: ನಾಪತ್ತೆ ಆದ ವ್ಯಕ್ತಿಯನ್ನು ಬಂಧಿಸಿ ಆಸ್ಪತ್ರೆಗೆ ದಾಖಲು

- Advertisement -Nitte

ಹಾವೇರಿ: ಜಿಲ್ಲೆಯಲ್ಲಿ ಕೋವಿಡ್ ಮಹಾಮಾರಿ ತನ್ನ ಕರಾಳ ಸ್ವರೂಪವನ್ನು ಮತ್ತೆ ತೋರಿಸಲಾರಂಭಿಸಿದ್ದು ಸೋಮವಾರ ೯ ಜನರನ್ನು ಆವರಿಸಿಕೊಳ್ಳುವ ಮೂಲಕ ಸೋಂಕಿತರ ಸಂಖ್ಯೆ ೧೭೫ಕ್ಕೆ ಏರಿದಂತಾಗಿದೆ. ಗುಣಮುಖರಾಗಿ ಇಂದು ೧೯ ಜನರು ಬಿಡುಗಡೆ ಆಗಿದ್ದಾರೆ.
ಸೋಮವಾರ ಶಿಗ್ಗಾಂವ ತಾಲೂಕಿನಲ್ಲಿ ೬ ಜನರು ಸೋಂಕಿತರಾದರೆ ಅಷ್ಟೇ ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಹಾವೇರಿ, ಹಾನಗಲ್ ಮತ್ತು ಹಿರೇಕೆರೂರ ತಾಲೂಕಿನಲ್ಲಿ ತಲಾ ಒಂದು ಸೋಂಕಿತ ಪ್ರಕರಣಗಳು ಕಂಡುಬಂದರೆ ಕ್ರಮವಾಗಿ ಓರ್ವ, ಮೂವರು ಮತ್ತು ಏಳು ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.
ಬಂಧಿಸಿ ಆಸ್ಪತ್ರೆಗೆ ದಾಖಲು
ಜಿಲ್ಲೆಯ ರಟ್ಟಿಹಳ್ಳಿ ತಾಲ್ಲೂಕಿನ ಪರ್ವತಸಿದ್ಧಗೇರಿಯ ವ್ಯಕ್ತಿಗೆ (ಪಿ-೨೩೨೨೮ (ಹೆಚ್‌ವಿಆರ್-೧೬೫))ಭಾನುವಾರ ಸೋಂಕು ದೃಢಪಟ್ಟಿತ್ತು ಆದರೆ ಇತನನ್ನು ಆಸ್ಪತ್ರೆಗೆ ದಾಖಲಿಸಲು ಮನೆಗೆ ಹೋದ ಸಂದರ್ಭದಲ್ಲಿ ಈತನು ಮನೆಯಲ್ಲಿ ಇರದೆ ನಾಪತ್ತೆ ಆಗಿದ್ದ. ಈ ವ್ಯಕ್ತಿಯನ್ನು ಸೋಮವಾರ ಪೊಲೀಸರು ಬಂಧಿಸಿ ಹಿರೇಕೆರೂರಿನ ಡೆಡಿಕೆಟೆಡ್ ಹೆಲ್ತ್ ಸೆಂಟರನಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.
ಜಿಲ್ಲೆಯ ಶಿಗ್ಗಾವಿ ತಾಲೂಕಿನಲ್ಲಿ ಇವರೆಗೆ ಅತಿ ಹೆಚ್ಚು ೬೮ ಸೋಂಕಿತರು ಕಂಡುಬಂದಿದ್ದು, ಆ ನಂತರದ ಸ್ಥಾನಗಳನ್ನು ಹಾನಗಲ್ (೨೯) ಮತ್ತು ಹಿರೇಕೆರೂರ (೨೬) ತಾಲೂಕುಗಳು ಪಡೆದುಕೊಂಡಿವೆ. ಇವರೆಗೆ ೫೬ ಜನರು ಗುಣಮುಖರಾಗಿ ಬಿಡುಗಡೆ ಆಗಿದ್ದರೆ ಇನ್ನು ೧೧೭ ಪ್ರಕರಣಗಳು ಸಕ್ರೀಯವಾಗಿವೆ ಇಬ್ಬರು ಮರಣಹೊಂದಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss