ಹಾವೇರಿ: ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಯಡಿ ಜಿಲ್ಲೆಯ ೪೨೮೦ ಫಲಾನುಭವಿಗಳಿಗೆ ಎಪ್ರಿಲ್-೨೦೨೦ ತಿಂಗಳಿನಿಂದ ಪ್ರತಿ ತಿಂಗಳಿಗೆ ಒಂದರಂತೆ ಮೂರು ರಿಫಿಲ್ ಸಿಲೆಂಡರ್ಗಳನ್ನು ಉಚಿತವಾಗಿ ವಿತರಿಸಲು ಸರ್ಕಾರ ಆದೇಶ ಹೊರಡಿಸಿದೆ.
ಈ ಯೋಜನೆಯಡಿ ಜಿಲ್ಲೆಯ ೪೨೮೦ ಫಲಾನುಭವಿಗಳಿಂದ ಹಿಂದೆ ಸಂಗ್ರಹಿಸಲಾದ ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಯ ಮಾಹಿತಿಯು ಆಹಾರ ನಿರೀಕ್ಷಕರ ಲಾಗಿನ್ನಲ್ಲಿ ಈಗಾಗಲೇ ಲಭ್ಯವಿರುತ್ತದೆ. ಒಂದು ವೇಳೆ ಫಲಾನುಭವಿಗಳ ಮಾಹಿತಿ ತಪ್ಪಾಗಿದ್ದಲ್ಲಿ ಹಾಗೂ ತಿದ್ದುಪಡಿಯಾಗಿಬೇಕಾದಲ್ಲಿ ಅಂತಹ ಫಲಾನುಭವಿಗಳು ಆಯಾ ತಾಲೂಕಿನ ತಹಶೀಲ್ದಾರ ಕಚೇರಿಯ ಆಹಾರ ಶಾಖೆಗೆ ಭೇಟಿ ನೀಡಿ ಜೂ.೧೦ ರೊಳಗಾಗಿ ತಮ್ಮ ಸರಿಯಾದ ಮಾಹಿತಿಯನ್ನು ಆಹಾರ ನಿರೀಕ್ಷಕರಿಗೆ ನೀಡಿ ತಿದ್ದುಪಡಿಮಾಡಿಕೊಳ್ಳಲು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕು ಆಹಾರ ಶಿರಸ್ತೇದಾರ್ ಅಥವಾ ಆಹಾರ ನಿರೀಕ್ಷಕರನ್ನು ಸಂಪರ್ಕಿಸಬಹುದು.