ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, May 6, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಹಾವೇರಿ| ನಗರಸಭೆ ನೂತನ ಸದಸ್ಯರ ಮೇಲೆ ದಾಖಲಾಗಿರುವ ಜಾತಿ ನಿಂದನೆ ಪ್ರಕರಣಕ್ಕೂ , ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ: ನೆಹರು ಓಲೇಕಾರ

ಹಾವೇರಿ:  ನಗರಸಭೆ ನೂತನ ಮೂವರು ಸದಸ್ಯರ ಮೇಲೆ ದಾಖಲಾಗಿರುವ ಜಾತಿ ನಿಂದನೆ ಪ್ರಕರಣಕ್ಕೂ, ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಶಾಸಕ ನೆಹರು ಓಲೇಕಾರ ಸ್ಪಷ್ಟಪಡಿಸಿದರು.
ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಶನಿವಾರ ಜರುಗಿದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಬಸವರಾಜ ಬೆಳವಡಿ ಅವರ ನಾಮಪತ್ರವನ್ನು ಹಿಂದೆ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣ ಸ್ಥಳೀಯವಾಗಿದ್ದು ಇದಕ್ಕು ನನಗಾಗಲಿ ಪಕ್ಷಕ್ಕಾಗಲಿ ಸಂಬಂಧವಿಲ್ಲ ವಿನಾಕಾರಣ ಕಾಂಗ್ರೆಸ್ಸಿಗಳು ಆಪಾದನೆ ಮಾಡುತ್ತಿದ್ದಾರೆ, ಅವರ ಆಪಾದನೆಯಲ್ಲಿ ಯಾವುದೇ ಹುರುಳಿಲ್ಲ ಎಂದು ಸ್ಪಷ್ಟಪಡಿಸಿದರು.
ಪಕ್ಷೇತರಲ್ಲಿ ಬಹುತೇಕರು ಬಿಜೆಪಿ ಭಂಡಾಯ ಸದಸ್ಯರಿದ್ದರೂ ಅವರ ಮನವಲಿಸಿ ನಗರಸಭೆಯಲ್ಲಿ ಅಧಿಕಾರದ ಚುಕ್ಕಾಣೆ ಹಿಡಿಯಬಹುದಾಗಿತ್ತು. ಆದರೆ ಪಕ್ಷೇತರರು ಮೊದಲು ಬಿಜೆಪಿಗೆ ಬೆಂಬಲ ನೀಡುವುದಾಗಿ ಹೇಳಿದ್ದರು ಆದರೆ ವಿವಿಧ ಕಾರಣಗಳಿಗೆ ಅವರು ಕಾಂಗ್ರೆಸ್ಸಿಗೆ ಬೆಂಬಲವನ್ನು ಸೂಚಿಸಿದ್ದರಿಂದ ಅಧಿಕಾರಕ್ಕೆ ಬರುವುದು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.
ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಅಧಿಕಾರ ರಚನೆಗೆ ಬೇಕಾದ ಸಂಖ್ಯಾಬಲವಿಲ್ಲದ ಕಾರಣಕ್ಕೆ ಪಕ್ಷದ ಅಧ್ಯರ್ಥಿ ಅಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ್ದ ನಾಮಪತ್ರವನ್ನು ಹಿಂದೆ ಪಡೆದುಕೊಳ್ಳಲಾಯಿತು. ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಅವಿರೋಧವಾಗಿ ಆಯ್ಕೆ ಆಗುವುವಂತೆ ಮಾಡಲಾಯಿತು ಎಂದು ಹೇಳಿದರು.
ನಗರದ ಅಭಿವೃದ್ಧಿ ವಿಷಯದಲ್ಲಿ ನಾನು ಹಾಗೂ ಶಾಸಕರು ಅಧ್ಯಕ್ಷರಿಗೆ ಸಂಪೂರ್ಣವಾಗಿ ಬೆಂಬಲ ನೀಡುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಶಿವಯೋಗಿ ಹುಲಿಕಂತಿಮಠ, ಗಿರೀಶ ತುಪ್ಪದ, ಚನ್ನಮ್ಮ ಬ್ಯಾಡಗಿ ಹಾಗೂ ಇತರರಿದ್ದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss