Sunday, June 26, 2022

Latest Posts

ಹಾವೇರಿ| ಪಿಎಸ್ಐ ಸಹಿತ14 ಜನರಿಗೆ ಕೋವಿಡ್ ಸೋಂಕು, 3 ಬಿಡುಗಡೆ

ಹಾವೇರಿ: ಪೊಲೀಸ್ ಸಬ್ ಇನ್ಸಪೆಕ್ಟರ್, ಸಿ.ಆರ್.ಪಿ.ಎಫ್ ಕಾನ್‌ಸ್ಟೇಬಲ್ ಸೇರಿ ಜಿಲ್ಲೆಯಲ್ಲಿ ೧೪ ಜನರಿಗೆ ಕೋವಿಡ್ ದೃಢಗೊಂಡಿದೆ. ಇಬ್ಬರು ಮೃತಪಟ್ಟಿದ್ದಾರೆ. ಮೂರು ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಜಿಲ್ಲೆಯಲ್ಲಿ ಭಾನುವಾರದ ಪ್ರಕರಣಗಳು ಸೇರಿದಂತೆ ಈವರೆಗೆ ೩೦೨ ಕೋವಿಡ್-೧೯ ಪಾಸಿಟಿವ್ ಪ್ರಕರಣ ದೃಢಗೊಂಡಿವೆ. ಇಂದಿನವರೆಗೆ ೧೩೭ ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಹೊಂದಿದ್ದಾರೆ ಹಾಗೂ ಇಂದಿನ ಪ್ರಕರಣಗಳು ಸೇರಿ ಈವರೆಗೆ ಆರು ಜನರು ಮೃತಪಟ್ಟಿದ್ದಾರೆ. ೧೫೯ ಪ್ರಕರಣಗಳು ಸಕ್ರಿಯವಾಗಿವೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಮಾಹಿತಿ ನೀಡಿದ್ದಾರೆ.
ಭಾನುವಾರ ಹಾವೇರಿ ಹಾಗೂ ಹಿರೇಕೆರೂರು ತಾಲೂಕಿನಲ್ಲಿ ತಲಾ ಐದು, ಶಿಗ್ಗಾಂವ, ರಾಣೇಬೆನ್ನೂರು, ಹಾನಗಲ್ ಹಾಗೂ ಬ್ಯಾಡಗಿ ತಾಲೂಕಲ್ಲಿ ತಲಾ ಒಬ್ಬರಂತೆ ೧೪ ಜನರಿಗೆ ಪಾಸಿಟಿವ್ ದೃಢಪಟ್ಟಿದೆ.
ಹಾವೇರಿ ತಾಲೂಕಿನ ಹೊಸರಿತ್ತಿಯ ೩೯ ವರ್ಷದ ಸಿ.ಆರ್.ಪಿ.ಎಫ್. ಕಾನ್‌ಸ್ಟೇಬಲ್(ಎಚ್.ವಿ.ಆರ್.-೨೯೫), ಇವರು ಜಮ್ಮುವಿನಿಂದ ಬಂದವರಾಗಿದ್ದಾರೆ. ಐ.ಎಲ್.ಐ. ಲಕ್ಷಣ ಹೊಂದಿದ್ದಾರೆ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
ಹಾವೇರಿ ತಾಲೂಕಿನಲ್ಲಿನ ಕೆರಿಮತ್ತಿಹಳ್ಳಿಯ ಗೋಲ್ಡನ್ ಲೇಔಟ್‌ನ ೪೧ ವರ್ಷದ ಸಹಾಯಕ ಸಬ್ ಇನ್ಸಪೆಕ್ಟರ್(ಎಚ್.ವಿ.ಆರ್.-೨೯೭)ಗೆ ಸೋಂಕು ದೃಢಪಟ್ಟಿದೆ.
ಬಹು ಅಂಗಾಂಗ ವೈಫಲ್ಯದಿಂದ ಶಿಗ್ಗಾಂವ ನಗರದ ಖಾಜೆಖಾನ್ ಓಣಿಯ ನಿವಾಸಿ ೭೦ ವರ್ಷದ ಮಹಿಳೆ ( ಪಿ-೨೮೩೯೪) ನಿಧನರಾಗಿದ್ದಾರೆ. ಇವರನ್ನು ಜು.೪ ರಂದು ಮಧುಮೇಹ ರೋಗದ ಹೆಚ್ಚಳ, ಉಸಿರಾಟದ ತೊಂದರೆಯಿಂದ ಶಿಗ್ಗಾಂವ ತಾಲ್ಲೂಕ ಆಸ್ಪತ್ರೆಯಿಂದ ಜಿಲ್ಲಾ ಆಸ್ಪತ್ರೆಗೆ ಸಾರಿ ವಾರ್ಡಗೆ ದಾಖಲಿಸಿ ವೆಂಟಿಲೇಟರ್ ಮೂಲಕ ಚಿಕಿತ್ಸೆಯನ್ನು ನೀಡಲಾಗುತಿತ್ತು.
ರಾಣೇಬೆನ್ನೂರು ನಗರದ ಎ.ಕೆ.ಜೆ ಕಾಲೋನಿ ನಿವಾಸಿಯಾಗಿದ್ದ ೪೨ ವರ್ಷದ ಮಹಿಳೆ (ಪಿ- ೩೬೮೮೧) ಜ್ವರ ಪೀಡಿತರಾಗಿದ್ದರಿಂದ ಜುಲೈ ೦೮ ರಂದು ಸಾರ್ವಜನಿಕ ಆಸ್ಪತ್ರೆ, ರಾಣೇಬೆನ್ನೂರು ನಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಆಡಳಿತ ವೈದ್ಯಾಧಿಕಾರಿಯವರು ಆಕೆಯು ಆರೋಗ್ಯವನ್ನು ಪರೀಕ್ಷಿಸಿ ತುರ್ತು ಚಿಕಿತ್ಸೆಗಾಗಿ ಆಂಬುಲೆನ್ಸ್ ಮೂಲಕ ಜಿಲ್ಲಾ ಆಸ್ಪತ್ರೆಗೆ ಬರುವ ಮಾರ್ಗದಲ್ಲಿ ಮಹಿಳೆ ಸಾವನ್ನಪ್ಪಿರುತ್ತಾರೆ. ಈ ಇಬ್ಬರನ್ನು ಕೊವೀಡ್-೧೯ ನಿಯಮದಂತೆ ಶವ ಸಂಸ್ಕಾರ ನಡೆಸಲಾಗಿದೆ.
ಜಿಲ್ಲೆಯ ರಾಣೇಬೆನ್ನೂರಿನ ವ್ಯಕ್ತಿಯೋರ್ವರು ಡಾವಣಗೇರಿಯಲ್ಲಿ ಕೋವಿಡ್‌ದಿಂದ ಇತ್ತೀಚೆಗೆ ಮೃತಪಟ್ಟಿದ್ದರು, ಇವರ ಪತ್ನಿ ಬೇರೆ ಕಾಯಿಲೆಯಿಂದ ಶನಿವಾರ ನಿಧನರಾಗಿದ್ದರು. ಅವರ ಶವ ಸಂಸ್ಕಾರ ನೆರವೇರಿಸಲು ಕೂನಬೇವು ಗ್ರಾಮದಲ್ಲಿ ನೆರವೇರಿಸಲು ಜಿಲ್ಲಾಡಳಿತ ಮುಂದಾಗಿತ್ತು ಆದರೆ ಈ ಗ್ರಾಮಸ್ತರು ಮಾತ್ರ ಈ ಗ್ರಾಮದಲ್ಲಿ ಅಂತ್ಯ ಸಂಸ್ಕಾರ ಮಾಡಬಾರದೆಂದು ಪ್ರತಿಭಟನೆ ಮಾಡಿದರು.
ಮಹಿಳೆಯ ಸಾವಿಗೂ ಮುನ್ನ ಸ್ವ್ಯಾಬ್ ಪರೀಕ್ಷೆ ಮಾಡಲಾಗಿದ್ದು, ವರದಿ ನೆಗೆಟಿವ್ ಬಂದಿದೆ. ಆದರೂ ಕೂಡ ಸ್ಮಶಾನ ಪ್ರದೇಶದ ಸುತ್ತಮುತ್ತಲಿನ ಜನರು ಯಾವುದೇ ಕಾರಣಕ್ಕೂ ಶವಸಂಸ್ಕಾರ ಮಾಡಕೂಡದು ಎಂದು ಪ್ರತಿಭಟನೆಗೆ ಮುಂದಾದರು. ಆಗ ತಹಶೀಲ್ದಾರ ಬಸನಗೌಡ ಕೋಟೂರ ಪೊಲೀಸ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸಿ
ಮುಂದೆ ಹೀಗಾಗದಂತೆ ಕ್ರಮ ಕೈಗೊಳ್ಳುವದಾಗಿ ತಿಳಿಸಿ ಅಂತ್ಯ ಸಂಸ್ಕಾರವನ್ನು ಮಾಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss