ಹಾವೇರಿ: ಜಿಲ್ಲೆಯಲ್ಲಿ ಓರ್ವ ಪೊಲೀಸ್ ಅಧಿಕಾರಿ, ನಾಲ್ವರು ಪೊಲೀಸರು, ಶುಶ್ರೂಷಕಿ, ಹೋಂ ಗಾರ್ಡ್, ಸಮುದಾಯ ಆರೋಗ್ಯ ಕೇಂದ್ರ ಡಿ ದರ್ಜೆ ನೌಕರ ಸೇರಿ ೪೦ ಜನರಿಗೆ ಕೊರೋನಾ ಸೋಂಕು ಮಂಗಳವಾರ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.
ಜಿಲ್ಲೆಯ ಹಿರೇಕೆರೂರ ತಾಲೂಕಿನ ಸಿಪಿಐ, ಮೂವರು ಪೊಲೀಸ್ ಕಾನ್ಸಟೇಬಲ್, ಓರ್ವ ಗೃಹ ರಕ್ಷಕ ದಳದ ಸಿಬ್ಬಂಧಿ, ರಾಣೇಬೆನ್ನೂರಿನ ಮಹಿಳಾ ಪೊಲೀಸ್ ಸಿಬ್ಬಂಧಿ, ಖಾಸಗಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶುಶ್ರೂಷಕಿಯೋರ್ವರಿಗೆ, ಬಂಕಾಪೂರ ಸಮುದಾಯ ಆರೋಗ್ಯ ಕೇಂದ್ರದಲ್ಲಿನ ಡಿ ದರ್ಜೆ ನೌಕರನಿಗೆ ಸೋಂಕು ಕಾಣಿಸಿಕೊಂಡಿದೆ.
ಜಿಲ್ಲೆಯ ಹಿರೇಕೆರೂರ ತಾಲೂಕಿನಲ್ಲಿ ೧೧, ಹಾನಗಲ್ ೨, ಹಾವೇರಿ ೬, ರಾಣೇಬೆನ್ನುರ ೩, ಸವಣೂರ ೧೧ ಹಾಗೂ ಶಿಗ್ಗಾಂವ ತಾಲೂಕಿನಲ್ಲಿ ೭ ಪ್ರಕರಣಗಳು ಸೇರಿ ಒಟ್ಟು ೪೦ ಪ್ರಕರಣಗಳು ಕಂಡುಬಂದಿವೆ.
ಜಿಲ್ಲೆಯಲ್ಲಿ ಎಂಟು ನೂರರ ಗಡಿದಾಟಿದ ಸೋಂಕಿತರ ಸಂಖ್ಯೆ. ಇವರಲ್ಲಿ ೫೦೧ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಇನ್ನು ೩೦೨ ಜನರಲ್ಲಿ ಸಕ್ರೀಯವಾಗಿದ್ದರೆ ಇಂದಿನವರೆಗೆ ೨೪ ಜನರು ಮರಣಹೊಂದಿದ್ದಾರೆ. ಇಂದು ಯಾವುದೇ ಮರಣ ಪ್ರಕರಣಗಳಿಲ್ಲದಿದ್ದರೂ ೮ ಜನರಿಗೆ ಐಸಿಯುದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಂಗಳವಾರ ೨೧ ಜನರು ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.